ಮೋದಿ ಹಾಡು ಹಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಖಂಡಿಸಿ ಹೋರಾಟ- ಶಾಸಕ ಶ್ರೀವತ್ಸ.  

ಮೈಸೂರು,ಏಪ್ರಿಲ್, 19,2024 (www.justkannada.in): ಮೋದಿ ಹಾಡು ಹಾಡಿದ್ದಕ್ಕೆ ಯುವಕ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುವುದಾಗಿ ಬಿಜೆಪಿ ಶಾಸಕ ಶ್ರೀವತ್ಸ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಶಾಸಕ ಶ್ರೀವತ್ಸ, ಮೂರು ದಿನಗಳ ಹಿಂದೆ ಆ ಯುವಕ ನನ್ನನ್ನು ಭೇಟಿ ಮಾಡಿದ್ದ. ನಾನೇ ಆ ಗೀತೆಯನ್ನು ನೋಡಿ ಬಿಡುಗಡೆ ಮಾಡಿದ್ದೆ. ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮೋದಿ ಮೂರನೇ ಬಾರಿ ಯಾಕೆ ಪಿಎಂ ಆಗಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ ತೋರಿಸಲಾಗಿದೆ. ಇಂದು ಆ ಯುವಕನ ಮೇಲೆ ಮೋದಿ ಹಾಡು ಹಾಡಿದ ವಿಚಾರಕ್ಕೆ ಹಲ್ಲೆ ಮಾಡಲಾಗಿದೆ ಅಂತ ಹೇಳಲಾಗಿದೆ. ಯುವಕನೇ ಹೇಳುವಂತೆ ಯುವಕರ ಗುಂಪು ಹಲ್ಲೆ ಮಾಡಿ ಮೂತ್ರ ವಿಸರ್ಜನೆ ಮಾಡಿದ್ದಾರಂತೆ. ಇದನ್ನು ನಾನು ಖಂಡಿಸುತ್ತೇನೆ. ಚುನಾವಣಾ ವೇಳೆಯಲ್ಲಿ ಇಂತಹ ಘಟನೆ ನಡೆಯಬಾರದು. ಈಗಾಗಲೇ ಡಿಸಿಪಿ ಜೊತೆ ಮಾತನಾಡಿದ್ದೇನೆ. ಸಂಜೆ ವೇಳೆಗೆ ನಿಖರ ಮಾಹಿತಿ ತಿಳಿಯುತ್ತೆ. ನಂತರ ನಮ್ಮ ಹೋರಾಟ ರೂಪಿಸುತ್ತೇವೆ ಎಂದು ತಿಳಿಸಿದರು.

ಹಲ್ಲೆಗೊಳಗಾದ ಯುವಕನ ವೈದ್ಯಕೀಯ ತಪಾಸಣೆ: ಪೊಲೀಸರ ವರ್ಗಾವಣೆ.

ಇನ್ನು  ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿಪುರಂ ಪೊಲೀಸ್ ಸಮ್ಮುಖದಲ್ಲಿ ಹಲ್ಲೆಗೊಳಗಾದ ಯುವಕ ರೋಹಿತ್ ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ಪ್ರಕರಣ ಸಂಬಂಧ ನಜರ್‌ಬಾದ್ ಠಾಣೆ ಪೊಲೀಸರನ್ನ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದ್ದು  ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಹಾಗೆಯೇ ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಸರ್ಕಾರಿ ಅತಿಥಿ ಗೃಹದ ಸುತ್ತಮುತ್ತ ಸ್ಥಳ ಮಹಜರು ಮಾಡಲಾಯಿತು. ಪೊಲೀಸರು ಅಜ್ಞಾತ ಸ್ಥಳಕ್ಕೆ ಯುವಕನನ್ನು ಕೊಂಡೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

Key words: mysore, Attack, youth, singing, Modi