ಅಚ್ಚೇ ದಿನ್ ಬರುತ್ತೆ ಅಂದ್ರು ಬಂತಾ..? ಅದಕ್ಕೆ  ಖಾಲಿ ಚೆಂಬು ಅಂತಿರೋದು- ಬಿಜೆಪಿ ಲೇವಡಿ ಮಾಡಿದ ಸಿಎಂ ಸಿದ್ದರಾಮಯ್ಯ

ಹಾಸನ,ಏಪ್ರಿಲ್,19,2024 (www.justkannada.in):  ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಚೊಂಬು ಜಾಹೀರಾತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ ಕೇಳಿ 15 ಲಕ್ಷ ಹಣ ಪ್ರತಿಯೊಬ್ಬ ನಾಗರೀಕನ ಅಕೌಂಟಿಗೆ ಹಾಕುತ್ತೇವೆ ಎಂದಿದ್ದರು ಹಾಕಿದ್ದೀರಾ..? ಅಚ್ಚೇದಿನ್ ಬರುತ್ತೆ ಎಂದಿದ್ದರು ಬಂತಾ. ಅದಕ್ಕೆ ಖಾಲಿ ಚೆಂಬು ಅಂತಿರೋದು ಎಂದು  ಲೇವಡಿ ಮಾಡಿದರು.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು ಮಾಡಿದ್ರ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಹೇಳಿದರು ಅದೆಲ್ಲವನ್ನು ಮಾಡಿದ್ರಾ? ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇವೆ ಅಂದ್ರು ಇಳಿಸಿದ್ದಾರಾ? ಬಿಜೆಪಿಯವರು ಅಚ್ಚೆದಿನ್ ಬರುತ್ತೆ ಅಂತ ಹೇಳಿದರು ಬಂತಾ? ಅದಕ್ಕೆ ಕಾಲಿ ಚೆಂಬು ಅಂತಿರೋದು ಎಂದು ವ್ಯಂಗ್ಯವಾಡಿದರು.

ಇನ್ನು ಸರ್ಕಾರ ವಜಾಮಾಡಬೇಕು ಎಂಬ ಶಾಸಕ ಸಿ.ಎನ್ ಅಶ್ವಥ್ ನಾರಾಯಣ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಯಾರು ಹೇಳುತ್ತಾರೆ ಮೊದಲು ಅವರನ್ನು ವಜಾ ಮಾಡಿ. ನಮಗೆ ಜನ ಆಶೀರ್ವಾದ ಮಾಡಿರೋದು ಇವರ್ಯಾರು ಹೇಳುವುದಕ್ಕೆ. 66 ಸ್ಥಾನ ಕೊಟ್ಟು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಿ ಎಂದು ಜನರು ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.

Key words: Acche din, CM Siddaramaiah,  fun,  BJP