ಸೈಟಿನ ವಿಚಾರಕ್ಕೆ ಗಲಾಟೆ: ಹಲ್ಲೆ ಆರೋಪ: ಎಫ್ ಐಆರ್ ದಾಖಲು

ಮೈಸೂರು,ಜನವರಿ,27,2023: ಸೈಟಿನ ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡು ತಾಲ್ಲೂಕಿನ ಬಿದರಗೂಡು ಗ್ರಾಮದಲ್ಲಿ ಗಲಾಟೆ ನಡೆದಿದ್ದು  ಗ್ರಾಮದ ಲೇ. ನಿಂಗಣ್ಣ ಎಂಬುವವರ ಮನೆ ಮೇಲೆ ಅದೇ ಗ್ರಾಮದ ವೀರಭದ್ರಪ್ಪ(ಗುಡ್ಡಪ್ಪ) ಕುಟುಂಬ ದಾಳಿ ಮಾಡಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಟಿನ ವಿಚಾರಕ್ಕೆ ಸಂಬಂಧಿಸಿದಂತೆ ವೀರಭದ್ರಪ್ಪ(ಗುಡ್ಡಪ್ಪ) ಮತ್ತು ಇವರ ಕುಟುಂಬಸ್ಥರು ಗ್ರಾಮದ ಲೇ. ನಿಂಗಣ್ಣ ಎಂಬುವವರ ಮನೆಗೆ ನುಗ್ಗಿ ಲೇ.ನಿಂಗಣ್ಣ ಕುಟುಂಬಸ್ಥರಾದ ಮಹದೇವಮ್ಮ, ಸುಕನ್ಯ, ಬಸವರಾಜು ಎಂಬುವವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದಿದೆ. ಅಲ್ಲದೆ ಮನೆ ಬಾಗಿಲು ಹೊಡೆದು ಹಾಕಿ ಮನೆಯವರ ಮೇಲೆ ಹಲ್ಲೆಗೆ ಯತ್ನಿಸಿದ್ದು ಈ ಕುರಿತು ಲೇ. ರಾಜಣ್ಣ ಪತ್ನಿ ಮಹದೇವಮ್ಮ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ವೀರಭದ್ರಪ್ಪ(ಗುಡ್ಡಪ್ಪ ) ಕುಟುಂಬದ ವಿರುದ್ದ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ  ಎಫ್ ಐಆರ್ ದಾಖಲಾಗಿದ್ದು, ಕ್ರಮ ಜರುಗಿಸುವಂತೆ ದೂರುದಾರ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Key words: mysore-assult-FIR-Police-station