ಇಂಡಿಯಾ ಮೈತ್ರಿಕೂಟ ಅನ್ನೋದು ಅಸಹಜ, ಅಸ್ವಾಭಾವಿಕ ಒಪ್ಪಂದ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ.

ಹುಬ್ಬಳ್ಳಿ,ಜನವರಿ,27,2024(www.justkannada.in): ಇಂಡಿಯಾ ಮೈತ್ರಿಕೂಟದಿಂದ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೊರ ಬಂದ ಬೆನ್ನಲ್ಲೆ ಇದೀಗ ನಿತೀಶ್ ಕುಮಾರ್ ಸಹ ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಡಿಯಾ ಮೈತ್ರಿಕೂಟದ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಇಂಡಿಯಾ ಮೈತ್ರಿಕೂಟಕ್ಕೆ ನೀತಿ ನಿಯತ್ತು ನೇತೃತ್ವ ಇಲ್ಲ  ಮೈತ್ರಿಕೂಟ ಅನ್ನೋದು ಅಸಹಜ, ಅಸ್ವಾಭಾವಿಕ ಒಪ್ಪಂದ. ಇಂಡಿಯಾ ಮೈತ್ರಿಕೂಟದಲ್ಲಿ ಫೋಟೋಶೂಟ್ ಅಷ್ಟೇ ಆಗಿತ್ತು ಎಂದು ಲೇವಡಿ ಮಾಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಪ.ಬಂಗಾಳ ಸಿಎಂ ಮಮತಾ  ಬ್ಯಾನರ್ಜಿ, ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎನ್ನುವ ಮೂಲಕ ಮೈತ್ರಿ ಕಡಿದುಕೊಂಡಿದ್ದರು. ಇದೀಗ ನಿತೀಶ್ ಕುಮಾರ್ ಅವರು ಸಹ ಬಿಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ. ಬಿಎಸ್ ಪಿ ಕೂಡ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಾಯಾವತಿ ಈಗಾಗಲೇ ಘೋಷಣೆ ಮಾಡಿದ್ದಾರೆ.

Key words: india-alliance-central Minister-Prahlad joshi