ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್…

ಮೈಸೂರು,ಸೆಪ್ಟಂಬರ್,5,2020(www.justkannada.in): ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಮೈಸೂರು ಮೇಟಗಳ್ಳಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.jk-logo-justkannada-logo

ಸತ್ಯ ನಾರಾಯಣ, ಮುಕುಂದ , ಪರಶುರಾಮ್ ಬಂಧಿತ ಆರೋಪಿಗಳು. ಬಂಧಿತ ಮೂವರು ತನ್ನ ಸ್ನೇಹಿತ ಸೋಮಶೇಖರ್ ನನ್ನೇ ಹತ್ಯೆಗೈದಿದ್ದರು. ಆಗಸ್ಟ್ 24 ರಂದು ಬಿಎಂ ಶ್ರೀ ನಗರದಲ್ಲಿ ಈ ಕೊಲೆ ನಡೆದಿತ್ತು.  ಟಾರ್ಚ್ ಲೈಟ್ ಬಿಟ್ಟ ಕಾರಣಕ್ಕೆ ಸ್ನೇಹಿತ ಸೋಮಶೇಖರ್ ಜತೆ ಗಲಾಟೆ ಮಾಡಿಕೊಂಡಿದ್ದ ಮೂವರು ಆರೋಪಿಗಳು ಈ ವೇಳೆ ಚಾಕುವಿನಿಂದ ಇರಿದು ಸೋಮಶೇಖರ್ ನನ್ನ  ಕೊಲೆ ಮಾಡಿ ಪರಾರಿಯಾಗಿದ್ದರು.mysore-arrest-accused-murder-friend

ಈ ಕುರಿತು ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಆರೋಪಿಗಳನ್ನು ಮೇಟಗಳ್ಳಿ ಠಾಣಾ ಪೋಲಿಸರು ಬಂಧಿಸಿದ್ದಾರೆ.

Key words: mysore-Arrest -accused – murder- friend.