ಮೈಸೂರಿನ ಯುವ ಸಾಹಿತಿ ಅನುಷ್ ಎ ಶೆಟ್ಟಿಗೆ ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿ….

ಮೈಸೂರು,ಜನವರಿ,14,2021(www.justkannada.in): ಮೈಸೂರಿನ ಯುವ ಸಾಹಿತಿ ಅನುಷ್ ಎ ಶೆಟ್ಟಿಗೆ  ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿ ಲಭಿಸಿದೆ.mysore- Anush A Shetty-Young writer -won - Best Creative Literature Award.

ನೀನು ನಿನ್ನೊಳಗೆ ಖೈದಿ ಕೃತಿ ಅತ್ಯುತ್ತಮ ಸೃಜನಶೀಲ ಸಾಹಿತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ರಾಜ್ಯದ ಹಲವು ಸಾಹಿತಿಗಳ ಪುಸ್ತಕಗಳ ನಡುವೆ ನೀನು ನಿನ್ನೊಳಗೆ ಖೈದಿ ಪುಸ್ತಕಕ್ಕೆ ಮೊದಲ ಬಹುಮಾನ ಲಭಿಸಿದೆ.

ಅವ್ವ ಪುಸ್ತಕಾಲಯದಿಂದ ಆಯೋಜಿಸಿದ್ದ 2020ರ ಸೃಜನಶೀಲ ಸಾಹಿತಿ ಪ್ರಶಸ್ತಿ ಆಯ್ಕೆ ವಿಭಾಗದಲ್ಲಿ ಅನುಷ್ ಎ ಶೆಟ್ಟಿ ಬರೆದಿರುವ ನೀನು ನಿನ್ನೊಳಗೆ ಖೈದಿ ಕೃತಿ ತೀರ್ಪುಗಾರರ ಮೆಚ್ಚುಗೆ ಗಳಿಸಿದೆ.  ಯುವ ಸಾಹಿತಿ ಅನುಷ್ ಎ ಶೆಟ್ಟಿ ಸುಮಾರು 4ಕ್ಕೂ ಹೆಚ್ಚು ಕೃತಿಗಳನ್ನ ರಚಿಸಿದ್ದಾರೆ.mysore- Anush A Shetty-Young writer -won - Best Creative Literature Award.

ಪತ್ರಿಕೋದ್ಯಮ ಮುಗಿಸಿರುವ ಅನುಷ್ ಈ ಹಿಂದೆ ಪತ್ರಿಕೆಯೊಂದರಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಅಂಕಣಕಾರರಾಗಿಯೂ ಹೊರ ಹೊಮ್ಮಿದ್ದಾರೆ.

Key words: mysore- Anush A Shetty-Young writer -won – Best Creative Literature Award.