“CFTRIಗೆ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕ”

ಮೈಸೂರು,ಜನವರಿ,14,2021(www.justkannada.in) : ಮೈಸೂರಿನ ಪ್ರತಿಷ್ಠಿತ ಸಂಸ್ಥೆ CFTRI (ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನ ಸಂಸ್ಥೆ)ಗೆ 70 ವರ್ಷದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿಯಾಗಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ನೇಮಕವಾಗಿದ್ದಾರೆ.jk-logo-justkannada-mysore

ಮೂಲತಃ ಆಂಧ್ರ ಪ್ರದೇಶದ ಡಾ.ಶ್ರೀದೇವಿ ಅವರ ಪೋಷಕರು ದಶಕಗಳ ಹಿಂದೆಯೇ ಉದ್ಯೋಗದ ನಿಮಿತ್ತ ಮೈಸೂರಿಗೆ ಬಂದು ನೆಲೆಸಿದ್ದರು.

ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಶಿಕ್ಷಣವನ್ನು ಮೈಸೂರಿನಲ್ಲೇ ಪೂರ್ಣಗೊಳಿಸಿದ್ದಾರೆ. ಜತೆಗೆ ಫುಡ್ ಸೈನ್ಸ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಿಎಫ್ ಟಿ ಆರ್ ಐ ನಲ್ಲೇ ೧೯೮೮ ರಲ್ಲಿ ಪೂರೈಸಿದ್ದರು ಎಂಬುದು ವಿಶೇಷ.CFTRI,first time,female,director,Dr.Sridevi Annapurna Singh,Appoint 

CFTRI ನಲ್ಲೇ ವ್ಯಾಸಂಗ ಮಾಡಿ, ಅಲ್ಲೇ ಕೆಲಸಕ್ಕೆ ಸೇರಿ ಇದೀಗ ಅದೇ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.

key words : CFTRI-first time-female-director-Dr.Sridevi Annapurna Singh-Appoint