ಮೃತದೇಹ ಮೈಸೂರಿಗೆ ತರುವುದಿಲ್ಲ: ಇಂತಹ ಅನ್ಯಾಯ ಯಾವ ತಂದೆ ತಾಯಿಗೂ ಬೇಡ- ಅಮೇರಿಕಾದಲ್ಲಿ ಗುಂಡಿಗೆ ಬಲಿಯಾದ ಅಭಿಷೇಕ್  ತಂದೆಯ ನೋವಿನ ಮಾತು…

ಮೈಸೂರು,ನ,30,2019(www.justkannada.in): ಅಭಿಷೇಕ್ ಮೃತದೇಹ ಮೈಸೂರಿಗೆ ತರುವುದಿಲ್ಲ, ನಾವು ಅಲ್ಲಿಗೆ ಹೋಗಿ ಕಾರ್ಯ ಮುಗಿಸಿ ಬರುತ್ತೇವೆ ಎಂದು  ಅಮೇರಿಕಾದಲ್ಲಿ ಅಪರಿಚಿತ ಗುಂಡಿಗೆ ಬಲಿಯಾದ ಮೈಸೂರಿನ ಅಭಿ಼ಷೇಕ್  ತಂದೆ ಸುದೇಶ್ ತಿಳಿಸಿದ್ದಾರೆ.

ಪುತ್ರನನ್ನ ಕಳೆದುಕೊಂಡ ದುಃಖವನ್ನ ತೋಡಿಕೊಂಡ ಮೃತ ಅಭಿಷೇಕ್ ಅವರ ತಂದೆ ಸುದೇಶ್, ನನ್ನ ಮಗ ಯಾವುದೇ ದುಶ್ಚಟಗಳಿಗೆ ಒಳಾಗಾಗಿರಲಿಲ್ಲ. ಅವನು ತನ್ನ ಸ್ವಂತ ಬಲದಲ್ಲಿ ನಿಲ್ಲುವ ಕಾರಣಕ್ಕಾಗಿ ಓದುವ ಜೊತೆ ಕೆಲಸ ಮಾಡುತ್ತಿದ್ದ. ನಾನು ಕೆಲವು ತಿಂಗಳ ಹಿಂದೆಯಷ್ಟೆ ಮೂರು ವಾರಗಳ ಕಾಲ ಅವನ ಜೊತೆ ಕಾಲ ಕಳೆದು ಬಂದಿದ್ದೆ. ಜನವರಿಯಲ್ಲಿ ಅವರ ತಾಯಿ ಅಲ್ಲಿಗೆ ಹೋಗಬೇಕಿತ್ತು. ಆದರೆ ದೇವರು ಅನ್ಯಾಯ ಮಾಡಿಬಿಟ್ಟ ನಮಗೆ. ಇಂತ ಅನ್ಯಾಯ ಯಾವ ತಂದೆ ತಾಯಿಗೂ ಬೇಡ ಎಂದು ನೋವಿನ ಮಾತುಗಳನ್ನಾಡಿದರು.

ನಮ್ಮಲ್ಲಿ ಶಿಕ್ಷಣ ವಲಯದಲ್ಲಿ ಮತ್ತು  ಕಾನೂನು ವ್ಯವಸ್ಥೆಯಲ್ಲಿ ಬದಲಾವಣೆಗಳಾಗಬೇಕು. ಮೆರಿಟ್ ಪಡೆದ ವಿದ್ಯಾರ್ಥಿಗಳಿಗೆ ನಮ್ಮಲಿಯೇ ಸೌಲಭ್ಯ ಸೀಗುವಂತಾಗಬೇಕು. ಆದರೆ ರಾಜಕೀಯ ಕಾರಣಗಳಿಂದ ಮೆರಿಟ್ ಪಡೆದವರು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಆದಕ್ಕಾಗಿ ಇತರೆ ದೇಶಗಳತ್ತ ಉನ್ನತ ಶಿಕ್ಷಣಕ್ಕಾಗಿ ಹೋಗುತ್ತಿದ್ದಾರೆ. ಅಲ್ಲಿ ನಡೆಯುವ ಇಂತಹ ಘಟನೆಗಳ ಬಗ್ಗೆ ಗೊತ್ತಿದ್ದರೂ ಅವರ ಭವಿಷ್ಯಕ್ಕಾಗಿ ವಿದೇಶಗಳಿಗೆ ಕಳುಹಿಸುತ್ತಿದ್ದೇವೆ. ಮುಂದೆ ಯಾರು ಇಂತಹ ತಪ್ಪು ಮಾಡಬೇಡಿ ಎಂದು ಮೃತ ಅಭಿಷೇಕ್ ತಂದೆ ಸುದೇಶ್ ಸಲಹೆ ನೀಡಿದರು

Key words: mysore- America-death-Abhishek- father