ಮೈಸೂರಲ್ಲಿ ಒಂದು ಮೈತ್ರಿ, ಹತ್ತು ಬಿರುಕು..!

ಮೈಸೂರು,ಫೆಬ್ರವರಿ,28,2021(www.justkannada.in) : ರಾಜ್ಯ ರಾಜಕರಣದಲ್ಲೇ ಬಿರುಗಾಳಿ ಎಬ್ಬಿಸಿದ ಪಾಲಿಕೆ ಮೇಯರ್ ಚುನಾವಣೆ. ಒಂದೆಡೆ ಜಿಲ್ಲೆಯಲ್ಲಿ ನಿಲ್ಲದ ನಾಯಕರ ಕೇಸರೇರಾಚಾಟ..! ಕಾಂಗ್ರೆಸ್ ಪಾಳಯದಲ್ಲಿ ಭಾರೀ ಬಿರುಕು ಮೂಡಿಸಿರುವ ಪಾಲಿಕೆ ಮೈತ್ರಿ. ಕೆಲ ನಾಯಕರ ತಲೆದಂಡಕ್ಕೂ ಕಾರಣವಾಯ್ತಾ ಕೊನೆ ಕ್ಷಣದ ಜೆಡಿಎಸ್ ಕಾಂಗ್ರೆಸ್ ಮೈತ್ರಿ? ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.jk

ಜಿಲ್ಲಾ ಕಾಂಗ್ರೆಸ್ ನಲ್ಲಿ ಬಣವಾಗಿ ಪರಿವರ್ತನೆ

ಜಿಲ್ಲಾ ಕಾಂಗ್ರೆಸ್ ನಲ್ಲಿ ಬಣವಾಗಿ ಪರಿವರ್ತನೆ. ನಾಯಕರಲ್ಲೇ ಒಬ್ಬರ ಮೇಲೆ ಒಬ್ಬರಿಗೆ ಅಸಮಾಧಾನ. ಇತ್ತ ಜೆಡಿಎಸ್ ನಾಯಕರಲ್ಲೂ ಮತ್ತಷ್ಟು ಬಿರುಕು. ಶಾಸಕ ಜಿಟಿಡಿ. ಸಂದೇಶ್ ನಾಗರಾಜ್ ವಜಾಗೊಳಿಸುವಂತೆ ಜೆಡಿಎಸ್ ನಾಯಕರಿಂದಲೇ ಒತ್ತಾಯ ಕೇಳಿ ಬಂದಿದೆ.

ಮೇಯರ್ ಚುನಾವಣೆಯ ಧಿಡೀರ್ ಮೈತ್ರಿ ರಾಷ್ಟ್ರಮಟ್ಟದ ರಾಜಕರಣಕ್ಕೂ ತಲುಪಿದೆ. ಜಿಲ್ಲೆಯಲ್ಲಿ ಗುಂಪು, ಗುಂಪು ರಾಜಕಾರಣಕ್ಕೆ ನಾಂದಿ ಹಾಡಿದ ಪಾಲಿಕೆ ಮೇಯರ್ ಚುನಾವಣೆ. ಘಟಾನುಘಟಿ ನಾಯಕರಿಗೆ ತಲೆಬಿಸಿಯಾಗುವಂತೆ ಮಾಡಿದೆ.

ನಾಳೆ ಕೆಪಿಸಿಸಿಗೆ ಸಂಪೂರ್ಣ ವರದಿ

Mysore-Alliance-Ten-Crack

ಧ್ರುವನಾರಾಯಣ್ ಹಾಗೂ ಶಾಸಕ ತನ್ವಿರ್ ಸೇಠ್ ನಾಳೆ ಕೆಪಿಸಿಸಿಗೆ ಸಂಪೂರ್ಣ ವರದಿ ಮಂಡಿಸಲಿದ್ದಾರೆ. ಪಾಲಿಕೆ ಚುನಾವಣೆಗೆ ಕೆಪಿಸಿಸಿಯಿಂದ ಆರ್.ಧ್ರುವನಾರಾಯಣ್ ಮೇಲುಸ್ತುವಾರಿ ವಹಿಸಿದ್ದರು.

key words : Mysore-Alliance-Ten-Crack