Sunday, September 20, 2026

BDA Apartments

ಮೈಸೂರಿನಲ್ಲಿ ಇಂದಿನಿಂದ ಎಲ್ಲಾ ಆಧಾರ್ ಕೇಂದ್ರಗಳು ತಾತ್ಕಾಲಿಕ ಬಂದ್ BDA JK_Adv BDA Adv
Home Front Page ಮೈಸೂರಿನಲ್ಲಿ ಇಂದಿನಿಂದ ಎಲ್ಲಾ ಆಧಾರ್ ಕೇಂದ್ರಗಳು ತಾತ್ಕಾಲಿಕ ಬಂದ್..

ಮೈಸೂರಿನಲ್ಲಿ ಇಂದಿನಿಂದ ಎಲ್ಲಾ ಆಧಾರ್ ಕೇಂದ್ರಗಳು ತಾತ್ಕಾಲಿಕ ಬಂದ್..

ಮೈಸೂರು,ಮಾ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಭೀತಿ ಹೆಚ್ಚಾಗಿದ್ದರೂ ಸಹ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಆಧಾರ್ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದ ಹಿನ್ನೆಲೆ ಮೈಸೂರಿನಲ್ಲಿ ಎಲ್ಲಾ ಆಧಾರ್ ಕೇಂದ್ರಗಳನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಮೈಸೂರಿನ ವಿಜಯನಗರ ಮೈಸೂರಿನ ವಿಜಯನಗರದಲ್ಲಿರುವ ಆಧಾರ್ ಕೇಂದ್ರಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು. ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಮೈಸೂರಿನಲ್ಲಿರುವ ಆಧಾರ್ ಸೇವಾ ಕೇಂದ್ರಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಬೆರಳಚ್ಚು ನೀಡಲು ಬರುತ್ತಿದ್ದರು

ಆಧಾರ್ ಕೇಂದ್ರಕ್ಕೆ ಆಗಮಿಸುತ್ತಿದ್ದ ಜನರಿಗೆ  ಅಲ್ಲಿನ ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಜರ್ ಸಿಂಪಡಿಸಿ ಒಳ ಬಿಡುತ್ತಿದ್ದರು.  ಈ ಬಗ್ಗೆ ಜಸ್ಟ್ ಕನ್ನಡ ಡಾಟ್ ಇನ್ ನಲ್ಲಿ ಸುದ್ದಿ ಬಿತ್ತರಿಸಲಾಗಿತ್ತು.

ಇದೀಗ ಎಚ್ಚೆತ್ತುಕೊಂಡಿರುವ ಮೈಸೂರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದ ಎಲ್ಲಾ ಆಧಾರ್ ಕೇಂದ್ರಗಳನ್ನೂ ಬಂದ್ ಮಾಡಿದೆ. ತಾತ್ಕಾಲಿಕವಾಗಿ ಆಧಾರ್ ಕೇಂದ್ರ ಸೇವೆಯನ್ನ ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈಗಾಗಲೇ ಮೈಸೂರು ಜಿಲ್ಲಾಡಳಿತ ಎಲ್ಲಾ ಸರ್ಕಾರಿ ಕಚೇರಿ ಮತ್ತು ಖಾಸಗಿ ಕಂಪನಿಗಳಲ್ಲಿ ಬಯೋಮೆಟ್ರಿಕ್ ಸ್ಥಗಿತಗೊಳಿಸಲು ಆದೇಶಿಸಿದೆ.

Key words: mysore- adhar seva Kendra- bandh-corona virus-effect