ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥ…..

ಮೈಸೂರು,ಜೂ,27,2020(www.justkannada.in): ಕಲುಷಿತ ನೀರು ಕುಡಿದು 15ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ತಿ.ನರಸೀಪುರ ತಾಲೂಕಿಮ ಕರೋಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನೀರು ಕುಡಿದ ಬಳಿಕ ಒಂದೇ ಗ್ರಾಮದ 15 ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ಬಳಿಕ ಕೂಡಲೇ ಗ್ರಾಮಸ್ಥರ ಸಹಾಯದಿಂದ ಅಸ್ವಸ್ಥರನ್ನ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.mysore-15-people-ill-due-contaminated-water

ಅಸ್ವಸ್ಥರ ಪೈಕಿ 3 ಜನರ  ಪರಿಸ್ಥಿತಿ ಗಂಭೀರವಾಗಿದ್ದು ಹೆಚ್ಚಿನ ಚಿಕೆತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆಗೆ ದಲಿತ ಸಂಘರ್ಷ ಸಮಿತಿ ಮುಖಂಡ ಆಲಗೂಡು ಶಿವಕುಮಾರ್ ಬೇಸರ ವ್ಯಕ್ತ ಪಡಿಸಿದ್ದಾರೆ.

Keywords: mysore-15 people -ill -due – contaminated water.