ಡ್ರಗ್ಸ್ ಮಾಫಿಯಾಕ್ಕೂ ನನ್ನ ಮಗನಿಗೂ ಸಂಬಂಧವಿಲ್ಲ – ನಟ ಯೋಗಿ ತಾಯಿ ಸ್ಪಷ್ಟನೆ…

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ನನ್ನ ಮಗನಿಗೆ ಯಾವುದೇ ದುರಾಭ್ಯಾಸವಿಲ್ಲ. ಡ್ರಗ್ಸ್ ಮಾಫಿಯಾಕ್ಕು, ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ ಎಂದು ನಟ ಲೂಸ್ ಮಾದ ಯೋಗಿ ತಾಯಿ ಅಂಬುಜಾ ಹೇಳಿದ್ದಾರೆ.jk-logo-justkannada-logoಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸಿಸಿಬಿ ನಟ ಲೂಸ್ ಮಾದ ಯೋಗಿ ಅವರಿಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ಪೋಷಕರು ನೋಟಿಸ್ ಬಂದಾಗ ಆಶ್ಚರ್ಯ ಆಯ್ತು. ವಿಚಾರಣೆಗೆ ಕರೆದಿರುವ ಬಗ್ಗೆ ಬೇಸರವಿಲ್ಲ ನನ್ನ ಮಗನ ಮೇಲೆ ನಂಬಿಕೆಯಿದೆ ಎಂದಿದ್ದಾರೆ.

ನನ್ನ ಮಗ ಯಾವುದೇ ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ. ತಪ್ಪು ಮಾಡಿದಾಗ ಆಗಲೇ ಬುದ್ದಿ ಹೇಳಿದ್ದೆನೆ. ಹಲವು ಚಿತ್ರಗಳಲ್ಲಿ ಬ್ಯುಯುಸಿಯಾಗಿದ್ದಾನೆ. ನನ್ನ ಮಕ್ಕಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನನ್ನ ಮಗ ಯಾವುದೇ ದುಶ್ಚಟಕ್ಕೆ ದಾಸನಾಗಿಲ್ಲ ಎಂಬ ನಂಬಿಕೆಯಿದೆ. ತಪ್ಪು ಮಾಡಿದರೆ ಶಿಕ್ಷೆಯಾಗಲಿ ಎಂದು ಹೇಳಿರುವುದಾಗಿ ತಿಳಿದುಬಂದಿದೆ.My-son-nothing-with-drug mafia-Actor Yogi's mother-Ambujaನನ್ನಿಂದಾಗಿಯೇ ನನ್ನ ಮಗ ಖಿನ್ನತೆಗೆ ಒಳಗಾಗುವಂತ್ತಾಯಿತು ಎಂದು ನಟ ಯೋಗಿ ತಂದೆ ಸಿದ್ದರಾಜು ಬೇಸರ ವ್ಯಕ್ತಪಡಿಸಿದ್ದಾರೆ. ಸಾಲು, ಸಾಲು ಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಯೋಗಿ ಅಭಿನಯಿಸಿದ ಎಲ್ಲಾ ಚಿತ್ರಗಳು ಸೋತವು. ಈ ಸೋಲುಗಳಿಂದ ಯೋಗಿ ಖಿನ್ನತೆಗೆ ಒಳಗಾದ ಎಂದು ಹೇಳಿದ್ದಾರೆ.

key words : My-son-nothing-with-drug mafia-Actor Yogi’s mother-Ambuja