ಪಕ್ಷ ಅಲ್ಲ ವ್ಯಕ್ತಿ ಮುಖ್ಯ: ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಬೆಂಬಲ- ನಟ ಕಿಚ್ಚ ಸುದೀಪ್ ಘೋಷಣೆ.

ಬೆಂಗಳೂರು,ಏಪ್ರಿಲ್ 5,2023(www.justkannada.in): ಸಿಎಂ ಬಸವರಾಜ ಬೊಮ್ಮಾಯಿ ಅವರು ಕಷ್ಟಕಾಲದಲ್ಲಿ ನನ್ನ ಜೊತೆ ನಿಂತಿದ್ದರು. ಅದಕ್ಕಾಗಿ ನಾನು ಈಗ ಸಿಎಂ ಬಸವರಾ ಬೊಮ್ಮಾಯಿ ಅವರ ಪರ ನಿಂತಿದ್ದೇನೆ. ಅವರಿಗೆ ಬೆಂಬಲ ಕೊಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಟ ಸುದೀಪ್, ನನಗೆ ಪಕ್ಷ ಮುಖ್ಯವಲ್ಲ ವ್ಯಕ್ತಿಗತ ಸಂಬಂಧ ಮುಖ್ಯ ಯಾವುದೇ ಪಕ್ಷದ ಪರ ನಾನು ನಿಂತಿಲ್ಲ. ಹಿಂದೆ ಅಂಬರೀಶ್ ಪರವೂ  ನಾನು ಪ್ರಚಾರ ಮಾಡಿದ್ದೆ. ಕಷ್ಟ ಕಾಲದಲ್ಲಿ ನನ್ನ ಜೊತೆ ಕೆಲವರು ಇದ್ದರು. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಕಷ್ಟದ ಸಮಯದಲ್ಲಿ ಸಿಎಂ ಬೊಮ್ಮಾಯಿ ಸಪೋರ್ಟ್​ ಮಾಡಿದ್ದಾರೆ. ಸಿಎಂ ಬೊಮ್ಮಾಯಿರನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಸಿಎಂ ಬೊಮ್ಮಾಯಿಗೆ ನಾನು ಬೆಂಬಲ ಕೊಡಲು ಇಷ್ಟಪಡುತ್ತೇನೆ ಎಂದು ​ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಯಾವ ಪಕ್ಷದಲ್ಲಿದ್ದರೂ ಬೆಂಬಲ ನೀಡುತ್ತಿದ್ದೆ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ​ ಎಂದು ನಟ ಸುದೀಪ್​ ಹೇಳಿದರು.

Key words: My -support – CM- Basavaraja Bommai- actor -Kiccha Sudeep