ಬೆದರಿಕೆ ಪತ್ರ ಬರೆದವರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ- ನಟ ಕಿಚ್ಚ ಸುದೀಪ್ ಖಡಕ್ ಎಚ್ಚರಿಕೆ.

ಬೆಂಗಳೂರು,ಏಪ್ರಿಲ್,5,2023(www.justkannada.in): ಅನಾಮಧೇಯ ವ್ಯಕ್ತಿಯಿಂದ ನಟ ಕಿಚ್ಚ ಸುದೀಪ್ ಗೆ ಬೆದರಿಕೆ ಪತ್ರ ಬಂದಿದ್ದು ಈ ಕುರಿತು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನಟ ಕಿಚ್ಚ ಸುದೀಪ್, ಬೆದರಿಕೆ ಪತ್ರ ಬರೆದವರಿಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಟ ಕಿಚ್ಚ ಸುದೀಪ್, ಇಂತಹ ಬೆದರಿಕೆಗಳಿಗೆಲ್ಲಾ ಹೆದರಲ್ಲ. ಪತ್ರ ಬರೆದವರು ಯಾರೆಂದು ಸಹ ನನಗೆ ಗೊತ್ತಿದೆ. ಆದ್ರೆ ಅವರ ಬಗ್ಗೆ ನಾನು ಮಾತನಾಡಲ್ಲ.  ಚಿತ್ರರಂಗದಲ್ಲಿ ನನ್ನ ಕಂಡರೆ ಆಗದವರು ಇದ್ದಾರೆ. ಅಂಥವರಿಗೆ ಅವರ ಮಾರ್ಗದಲ್ಲೇ ನಾನು ಉತ್ತರ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್, ನಟ ಸುದೀಪ್ ರಿಗೆ ಬೆದರಿಕೆ ಪತ್ರದ ಬಗ್ಗೆ ಮಂಜು ಎಂಬುವವರು ದೂರು ನೀಡಿದ್ದಾರೆ.  ನಟ ಸುದೀಪ್ ಗೆ  ಬೆದರಿಕೆ ಪತ್ರ ಬಂದಿದೆ ಎಂದು  ದೂರು ನೀಡಿದ್ದಾರೆ . ಪ್ರಕರಣದ ತನಿಖೆ ಸಿಸಿಬಿಗೆ ವರ್ಗಾವಣೆಯಾಗಿದೆ ಎಂದು ಮಾಹಿತಿ ನೀಡಿದರು.

Key words: Actor -Kiccha Sudeep- warns – threatening -letters