‘ಮೈ ಕ್ಲೀನ್ ಸಿಟಿ ಆ್ಯಪ್’ ನ ಹೊಸ ಆವೃತ್ತಿ ಬಿಡುಗಡೆ ಮಾಡಿದ ಮೈಸೂರು ಮಹಾ ನಗರ ಪಾಲಿಕೆ ಮೇಯರ್ ತಸ್ನೀಂ…

ಮೈಸೂರು,ಮಾ,13,2020(www.justkannada.in): ಮೈಸೂರಿನ ಸ್ವಚ್ಚತೆಗಾಗಿ ಮೈಸೂರು ಮಹಾನಗರ  ಪಾಲಿಕೆ  ಆ್ಯಪ್ ನ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡಿದೆ.

ಮೈಸೂರಿನ ಸ್ವಚ್ಚತೆಗಾಗಿ ಮೈ ಕ್ಲೀನ್ ಸಿಟಿ ಆ್ಯಪ್ ನ ಹೊಸ ಆವೃತ್ತಿಯನ್ನ ಪಾಲಿಕೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಮೇಯರ್ ತಸ್ನೀಂ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಉಪಮೇಯರ್ ಶ್ರೀಧರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಭಾಗಿಯಾಗಿದ್ದರು.

ಬಳಿಕ ಈ ಆ್ಯಪ್ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಗುರುದತ್ ಹೆಗಡೆ,  ಗೂಗಲ್ ಪ್ಲೇ ಮೂಲಕ ಆ್ಯಪ್ ಡೌನ ಲೋಡ ಮಾಡಬಹುದಾಗಿದೆ. ನಗರವನ್ನ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ಗುರಿಯೊಂದಿಗೆ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ. ಸಾರ್ವಜನಿಕರು ನೀಡುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಆ್ಯಪ್ ಸಹಾಯಕವಾಗಿದೆ. ಆ್ಯಪ್ ಮೂಲಕ ಸಮಸ್ಯೆಗಳನ್ನ ಪರಿಹರಿಸಲು ನಿಗಧಿತ ಕಾಲಮಿತಿ ನಿಗದಿಪಡಿಸಲಾಗಿದೆ. ನಿಗದಿತ ಸಮಯದೊಳಗೆ ವಾರ್ಡ್ ಅಧಿಕಾರಿ ಸಮಸ್ಯೆ ಬಗೆಹರಿಸದೇ ಇದ್ದರೆ ವಲಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.

Key words: my clean city- app- New  version –release- Mysore Mayor -Tasneem