Monday, August 3, 2026

BDA Apartments

Home Crime ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ 77 ಕೆ.ಜಿ ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್……

ಮುತ್ತೂಟ್ ಫೈನಾನ್ಸ್ ಕಚೇರಿಯಲ್ಲಿ 77 ಕೆ.ಜಿ ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್……

ಬೆಂಗಳೂರು,ಜ,1,2020(www.justkannada.in):  ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ನಲ್ಲಿ 77 ಕೆ.ಜಿ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಮುತ್ತೋಟ್ ಫೈನಾನ್ಸ್ ಕಂಪನಿಯಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ನೇಪಾಳದ ಗಡಿ ಭಾಗದಲ್ಲಿ  ವಿಶೇಷ ಪೊಲೀಸ್ ತಂಡ ಬಂಧಿಸಿದ್ದಾರೆ. ಬಂಧಿತರಿಂದ 8 ಕೆಜಿ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ.  ಇನ್ನು ಪ್ರಕರಣ ಸಂಬಂಧ ಉಳಿದ 10 ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಮುತ್ತೂಟ್ ಫೈನಾನ್ಸ್  ಕಚೇರಿಯ ಗೋಡೆ ಕೊರೆದು ಕನ್ನ ಹಾಕಿದ್ದ 12 ಮಂದಿ ಆರೋಪಿಗಳು 77 ಕೆಜಿ ಚಿನ್ನವನ್ನು ಹೊತ್ತೊಯ್ದಿದ್ದರು. ಆರೋಪಿಗಳು 77 ಕೆಜಿ ಒಟ್ಟಿಗೆ ಸಾಗಿಸರು ಆಗುವುದಿಲ್ಲ ಎಂಬುದಾಗಿ ತಮ್ಮ ಪಿಜಿಯಲ್ಲಿ ಚಿನ್ನವನ್ನು ಹಂಚಿಕೊಂಡಿದ್ದರು.  ಈ ವೇಳೆ ಕಚೇರಿ ಭದ್ರತಾ ಸಿಬ್ಬಂದಿಗಳಿಗೆ 8 ಕೆಜಿ ನೀಡಲಾಗಿತ್ತು. ಈ ಭದ್ರತಾ ಸಿಬ್ಬಂದಿಗಳು ನೇಪಾಳದ ಗಡಿಯಲ್ಲಿ ಇರುವುದನ್ನು ಪತ್ತೆ ಹಚ್ಚಿದ ವಿಶೇಷ ತಂಡ, ಇದೀಗ ಬಂಧಿಸಿ 8 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

Key words: Muthoot Finance- 77kg- gold- theft- case-two accused – Arrest.