ಆದೇಶ ಉಲ್ಲಂಘಿಸಿ ತೆರೆದಿದ್ದ ಮುತ್ತೂಟ್ ಫಿನ್ ಕಾರ್ಪ್ ಕಚೇರಿಗೆ ಬೀಗ…

ಕೆ.ಆರ್ ನಗರ,ಮೇ,15,2021(www.justkannada.in): ಆದೇಶ ಉಲ್ಲಂಘಿಸಿ ತೆರೆದಿದ್ದ ಕೆ.ಆರ್.ನಗರ ತಾಲ್ಲೂಕಿನ ಹೊಸೂರು ಮುತ್ತೂಟ್ ಫಿನ್ ಕಾರ್ಪ್ ಗೆ ಹಳಿಯೂರು ಗ್ರಾಮಪಂಚಾತಿ ಮತ್ತು ಚುಂಚನಕಟ್ಟೆ ನಾಡಕಚೇರಿಯ ಅಧಿಕಾರಿಗಳು ಕೋವಿಡ್ ಮುನ್ನಚ್ಚರಿಕೆಯ  ಹಿನ್ನಲೆಯಲ್ಲಿ ಶನಿವಾರ ಬೀಗ ಹಾಕಿಸಿದ ಘಟನೆ ನಡೆದಿದೆ.jk

ಕೆ.ಆರ್.ನಗರ ತಹಸೀಲ್ದಾರ್ ಎಂ .ಮಂಜುಳಾ  ಅವರು ಕೋವಿಡ್ ನಿಯಂತ್ರಣ ಮಾಡುವ ಸಲುವಾಗಿ ಮೈಕ್ರೋ ಫೈನಾನ್ಸ್  ಕಂಪನಿಗಳು ಸಾಲ ವಸೂಲಾತಿ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದರು.

ಇದನ್ನು ಉಲ್ಲಂಘನೆ ಮಾಡಿ ಮುತ್ತೂಟ್ ಫಿನ್ ಕಾರ್ಪ್ ನವರು ತಮ್ಮ ಸಂಸ್ಥೆಯನ್ನು ತೆರೆದು  ಹಣಕಾಸು ವ್ಯವಹಾರ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಹಳಿಯೂರು ಗ್ರಾ.ಪಂ.ಪಿಡಿಓ ಅಂಕನಹಳ್ಳಿ ಸುನಿಲ್ ಕುಮಾರ್ ಸಂಸ್ಥೆಗೆ ದಿಢೀರ್ ಭೇಟಿ ನೀಡಿ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು. ಕೋವಿಡ್ ಹೆಚ್ಚಳವಾಗುತ್ತಿದ್ದರು ಸಾಲ ವ್ಯವಹಾರ ಮಾಡದಂತೆ ತಾಲೂಕು ಆಡಳಿತ ಆದೇಶ ನೀಡದ್ದರು ಅದನ್ನು ಪಾಲನೆ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.muthoot-fin-corp-office-close-open-violation-order-k-r-nagar

ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ಸುನಿಲ್ ಕುಮಾರ್, ಮುಂದಿನ ತಾಲೂಕು ಆಡಳಿತದ  ಆದೇಶದವರಗೆ ನಿಮ್ಮ ಮುತ್ತೂಟ್ ಪಿನ್ ಕಾರ್ಪ್ ಅನ್ನು ಮುಚ್ಚಬೇಕು. ತಾಲೂಕು ಆಡಳಿತದ ಆದೇಶ ಉಲ್ಲಂಘಿಸಿದರೇ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿ ಬಾಗಿಲು ಹಾಕಿಸಿದರು

ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ತೇಜವಮೂರ್ತಿ. ಹಳಿಯೂರು ಗ್ರಾ.ಪಂ.ನ‌ ಡಿ.ಎಚ್.ಹರೀಶ್ ಹಾಜರಿದ್ದರು.

Key words: Muthoot fin Corp- office- close-open -violation – order-K.R nagar