Tuesday, August 18, 2026

BDA Apartments

Home Front Page ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆ

ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಉತ್ತರ ಪ್ರದೇಶದ ಮುಸ್ಲಿಂ ಮಹಿಳೆ

ಹೊಸದಿಲ್ಲಿ, ಮೇ 26, 2019 (www.justkannada.in): ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇ 23ರಂದು ಮಗುವಿಗೆ ಮುಸ್ಲಿಂ ಮಹಿಳೆಯೊಬ್ಬರು ‘ನರೇಂದ್ರ ದಾಮೋದರ್ ದಾಸ್ ಮೋದಿ’ ಎಂದು ಹೆಸರಿಟ್ಟಿದ್ದಾರೆ.

ಉತ್ತರ ಪ್ರದೇಶದ ಗೊಂಡಾದ ಮಹ್ರೌರ್ ಗ್ರಾಮದ ಮಹಿಳೆ ಮೈನಾಝ್ ಬೇಗಂ ತನ್ನ ಮಗುವಿಗೆ ‘ನರೇಂದ್ರ ಮೋದಿ’ ಎಂದು ಹೆಸರಿಟ್ಟಿದ್ದಾರೆ.

ಆದರೆ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಯ ಮನವೊಲಿಸಲು ಪ್ರಯತ್ನಿಸಿದರು. ಆದರೆ ಆಕೆ ಒಪ್ಪದ ಕಾರಣ ಕುಟುಂಬವೂ ಒಪ್ಪಿಗೆ ಸೂಚಿಸಿತು.