ಮೈಸೂರಿನಲ್ಲಿ ಯುವಕನ ಬರ್ಬರ ಕೊಲೆ.

ಮೈಸೂರು,ನವೆಂಬರ್,26,2025 (www.justkannada.in): ಸ್ನೇಹಿತನ ಜೊತೆ ಟೀ ಕುಡಿಯಲು ಹೋದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನ ಶಾಂತಿ ನಗರದಲ್ಲಿ ನಡೆದಿದೆ.

19 ವರ್ಷದ ಸಯ್ಯದ್ ಸೂಫಿಯನ್ ಕೊಲೆಯದ ಯುವಕ. ಮುಂಜಾನೆ 5.40ರ ಸುಮಾರಿಗೆ ಈ ಘಟನೆ ನಡೆದಿದೆ. ಇಬ್ಬರು ಸ್ನೇಹಿತರಿಂದಲೇ ಸಯ್ಯದ್ ಸೂಫಿಯನ್ ಕೊಲೆಯಾಗಿದ್ದು ಪರಸ್ಪರ ಹೊಡೆದಾಡಿಕೊಂಡು ಹತ್ಯೆ ಮಾಡಿದ್ದಾರೆ . ಯುವಕರು ಮದ್ಯ ವ್ಯಸನಿಯಾಗಿದ್ದರು ಎನ್ನಲಾಗಿದೆ.

ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಯುವಕ ಸಯ್ಯದ್ ನನ್ನು  ಕೊಲೆ ಮಾಡಿದ್ದು ಎದೆ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ  ಇರಿದಿದ್ದಾರೆ. ಕೊಲೆ ನಡೆಯುವ ವೇಳೆ ಯುವಕ ರಕ್ತದ ಮಡುವಿನಲ್ಲಿ ಬಿದ್ದು, ಸಹಾಯಕ್ಕೆ ಬೇಡಿದರೂ ಯಾವೊಬ್ಬ ನಾಗರೀಕರು ಸಹಾಯ ಮಾಡಿಲ್ಲ ಎನ್ನಲಾಗಿದೆ.  ಯುವಕ ಸಯ್ಯದ್ ರಸ್ತೆಯಲ್ಲೇ ನರಳಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದು ಉದಯಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Brutal murder, young man, Mysore.