ಪಟಾಕಿ ತರಲು ಹೋಗಿ ಕಿಡ್ನಾಪ್ ಆಗಿದ್ದ ಬಾಲಕನ ಹತ್ಯೆ: ಆರೋಪಿ ಬಂಧನ.

ಮೈಸೂರು,ನವೆಂಬರ್,4,2021(www.justkannada.in): ಪಟಾಕಿ ತರಲು ಹೋಗಿದ್ದ ಬಾಲಕನನ್ನ ಕಿಡ್ನಾಪ್ ಮಾಡಿ ಹತ್ಯೆ ಮಾಡಿದ ಆರೋಪಿಯನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ತಾಲೂಕಿನ ಹನಗೋಡಿನಲ್ಲಿ ನಿನ್ನೆ ರಾತ್ರಿ‌ ಘಟನೆ ನಡೆದಿದೆ. ಕಾರ್ತಿಕ್(10) ಅಪಹರಣಕ್ಕೆ ಒಳಗಾಗಿದ್ದ ಬಾಲಕ. ಜವರಯ್ಯ ಎಂಬಾತನೇ ಬಾಲಕನನ್ನ ಹತ್ಯೆಗೈದು ಇದೀಗ ಬಂಧಿತನಾಗಿರುವ ಆರೋಪಿ. ಪಟಾಕಿ ತರಲು ಹೋಗಿ  ಕಿಡ್ನಾಪ್ ಆಗಿದ್ದ ಬಾಲಕ ಕಾರ್ತಿಕ್ ಕಿಡ್ನಾಪ್ ಆಗಿದ್ದನು.

ಜವರಯ್ಯ ಎಂಬಾತ ಪುಟಾಣಿಯನ್ನು ಕೊಲೆಗೈದು ಬಿಸಾಡಿದ್ದನು ಪೊದೆಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಕಾರ್ತಿಕ್ ತರಕಾರಿ ಹೋಲ್‌ ಸೆಲ್ ಉದ್ಯಮಿ ನಾಗರಾಜ್ ಅವರ ಪುತ್ರ. ರಾತ್ರಿ 7.30ರ ವೇಳೆ ಪಟಾಕಿ ತರಲು ಬಾಲಕ ಕಾರ್ತಿಕ್ ಅಂಗಡಿಗೆ ಹೋಗಿದ್ದನು ಈ ವೇಳೆ ಬಾಲಕ ಕಾರ್ತಿಕ್‌ನನ್ನು ದುಷ್ಕರ್ಮಿ ಹೊತ್ತೊಯ್ದಿದ್ದನು. ಬಳಿಕ ತಂದೆಗೆ ಕರೆ ಮಾಡಿ 4 ಲಕ್ಷ ರೂ. ತರುವಂತೆ  ಬೇಡಿಕೆ ಇಟ್ಟಿದ್ದನು.

ಈ ಕುರಿತು ಬಾಲಕನ  ಕುಟುಂಬಸ್ಥರು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರಿಯಿಂದಲೇ ತನಿಖೆ ಶುರು ಮಾಡಿದ್ದರು. ಖುದ್ದು ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿತ್ತು. ಬೆಳಿಗ್ಗೆ ಬಾಲಕನ ಮನೆಗೆ ಶಾಸಕ ಎಚ್‌.ಪಿ.ಮಂಜುನಾಥ್ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು.

ಆದರೆ ಹಣ ನೀಡದ ಹಿನ್ನೆಲೆ ಬಾಲಕ ಕಾರ್ತಿಕ್ ನನ್ನ ಆರೋಪಿ ಜವರಯ್ಯ ಕೊಲೆ ಮಾಡಿದ್ದಾನೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರಿಂದ ಕೊಲೆ ಆರೋಪಿಯನ್ನ 24 ಗಂಟೆಯೊಳಗೆ  ಬಂಧಿಸಿದ್ದಾರೆ. ಎಸ್ಪಿ ಆರ್.ಚೇತನ್, ಎಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಬಂಧಿಸಿದ್ದಾರೆ. ಜವರಯ್ಯ ಹುಣಸೂರಿನ ದಾಸನಪುರ ನಿವಾಸಿಯಾಗಿದ್ದಾನೆ.

ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: murder – boy – kidnapped-arrest – accused-hunsur