Monday, September 14, 2026

BDA Apartments

ಡಾ.ಬಿ.ಆರ್ ಅಂಬೇಡ್ಕರ್ ಫೋಟೊಗೆ ಅಪಮಾನ : ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ...
Home Front Page ಡಾ.ಬಿ.ಆರ್ ಅಂಬೇಡ್ಕರ್ ಫೋಟೊಗೆ ಅಪಮಾನ : ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ಸದಸ್ಯ ರಾಜೀನಾಮೆ.

ಡಾ.ಬಿ.ಆರ್ ಅಂಬೇಡ್ಕರ್ ಫೋಟೊಗೆ ಅಪಮಾನ : ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ಸದಸ್ಯ ರಾಜೀನಾಮೆ.

ಮೈಸೂರು,ಫೆಬ್ರವರಿ,19,2022(www.justkannada.in): ರಾಯಚೂರಿನಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡರಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋಗೆ ಅಪಮಾನ ಹಿನ್ನಲೆ, ನ್ಯಾಯಾಧೀಶರ ನಡೆಗೆ ಬೇಸತ್ತು ಪುರಸಭಾ ಸದಸ್ಯರೊಬ್ಬರು ರಾಜೀನಾಮೆ ನೀಡಿದ್ದಾರೆ.

ಎಚ್.ಡಿ.ಕೋಟೆ ತಾಲೂಕಿನ ಮಿಲ್ ನಾಗರಾಜು ಎಂಬುವವರು  ಮೈಸೂರಿನ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ನನಗೆ ಈ ಘಟನೆ ಮಾನಸಿಕವಾಗಿ ನೋವುಂಟು ಮಾಡಿದೆ. ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ ನಾನು ಗೆದ್ದಿದ್ದೇನೆ. ಅವರಿಗೆ ಅವಮಾನ ಮಾಡಿದ ಮೇಲೆ ನನಗೆ ಈ ಅಧಿಕಾರ ಬೇಡ.ಡಾ.ಬಿ.ಆರ್ ಅಂಬೇಡ್ಕರ್ ಫೋಟೊಗೆ ಅಪಮಾನ reg

ಸ್ವಾಭಿಮಾನಕ್ಕೆ ಧಕ್ಕೆಯಾದರೆ ಅಲ್ಲಿ ಒಂದು ಗಳಿಗೆಯೂ ಇರಬೇಡ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದಕ್ಕಾಗಿ ನಾನು ಪುರಸಭಾ ಸ್ಥಾನಕ್ಕೆ ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿಗೆ ಪುರಸಭಾ ಸದಸ್ಯ ಮಿಲ್ ನಾಗರಾಜು ರಾಜೀನಾಮೆ ಪತ್ರ ಬರೆದಿದ್ದಾರೆ.

Key words: Municipal –member-resigns-mysore