ಮುಂಬೈ ,ಜನವರಿ,16,2026 (wwe.justkannada.in): ಮಹಾರಾಷ್ಟ್ರದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಫಲಿತಾಂಶ ಪ್ರಕಟವಾಗುತ್ತಿದೆ. ಬಿಜೆಪಿ –ಶಿವಸೇನೆ (ಶಿಂಧೆ) ಮೈತ್ರಿಕೂಟ 75 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.
ಮುಂಬೈ ಮಹಾನಗರ ಪಾಲಿಕೆಯ 227 ಸ್ಥಾನಗಳಲ್ಲಿ ಬಿಜೆಪಿ ಶಿವಸೇನೆ(ಶಿಂಧೆ) ಮೈತ್ರಿಕೂಟ 75 ವಾರ್ಡ್ ಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 9 ವಾರ್ಡ್ ಗಳಲ್ಲಿ ಶಿವಸೇನೆ( ಠಾಕ್ರೆ) ಮೈತ್ರಿಕೂಟ 64 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್ ಸಿಪಿ 1 ಹಾಗೂ ಇತರೆ 5 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸಿವೆ.
Key words: Mumbai, Municipal Corporation, Election, Result







