Saturday, September 12, 2026

BDA Apartments

ಮುಡಾ ಸೈಟ್ ವಾಪಸ್ ವಿಚಾರ: ಬಿಜೆಪಿ ವಿರುದ್ದ ಗೃಹ ಸಚಿವ ಪರಮೇಶ್ವರ್ ಗರಂ BDA JK_Adv BDA Adv
Home Front Page ಮುಡಾ ಸೈಟ್ ವಾಪಸ್ ವಿಚಾರ: ಬಿಜೆಪಿ ವಿರುದ್ದ ಗೃಹ ಸಚಿವ ಪರಮೇಶ್ವರ್ ಗರಂ

ಮುಡಾ ಸೈಟ್ ವಾಪಸ್ ವಿಚಾರ: ಬಿಜೆಪಿ ವಿರುದ್ದ ಗೃಹ ಸಚಿವ ಪರಮೇಶ್ವರ್ ಗರಂ

ಬೆಂಗಳೂರು, ಅಕ್ಟೋಬರ್,1,2024 (www.justkannada.in):  ಮುಡಾ ಸೈಟ್ ಹಿಂತಿರುಗಿಸುವುದಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪತ್ರ ಬರೆದಿರುವುದಕ್ಕೆ ಟೀಕಿಸುತ್ತಿರುವ ಬಿಜೆಪಿ ನಾಯಕರ ವಿರುದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ಮುಡಾ ಸೈಟ್ ವಾಪಸ್ ಮಾಡಿದ್ದು  ಇದು ಒಳ್ಳೆಯ ನಿರ್ಧಾರ. ಇದರಲ್ಲೂ ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುತ್ತಿದ್ದಾರೆ. ಕಾನೂನಾತ್ಮಕವಾಗಿ ಮುಂದೆ ಏನಾಗುತ್ತೇ ನೋಡಬೇಕು. ಮುಡಾ ಕೇಸ್ ನಲ್ಲಿ ಇಷ್ಟೆಲ್ಲಾ ಗೊಂದಲ ಮಾಡಿದ್ದಕ್ಕೆ ಸೈಟ್ ವಾಪಸ್ ನೀಡಿದ್ದಾರೆ ಎಂದು ಹೇಳಿದರು.

ಅಪಾದನೆ ಬಂದ ತಕ್ಷಣ ಇದು ಸತ್ಯ ಅಲ್ಲ. ಹೆದರಿ ಸೈಟ್ ವಾಪಸ್ ನೀಡಿದ್ದಾರೆಂಬುದು ಸುಳ್ಳು ಸಿಎಂ ಸಿದ್ಧರಾಮಯ್ಯ ಬೆಂಬಲಕ್ಕೆ 136 ಶಾಸಕರಿದ್ದಾರೆ. ಇಡೀ ಕಾಂಗ್ರೆಸ್ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ.  ನಾವು ಕಾನೂನು ಪ್ರಕಾರ ಹೋರಾಟ ಮುಂದುರೆಸುತ್ತೇವೆ ಎಂದರು.

ಮುಡಾ ಸೈಟ್ ವಾಪಸ್ ವಿಚಾರ VTU TOP BANNER 04

Key words: Muda site, return, Home Minister, Parameshwar, against BJP