Friday, September 11, 2026

BDA Apartments

Home Front Page ಮುಡಾ ಹಗರಣ ದಸರಾ ಆಚರಣೆ ಮೇಲೆ ಪರಿಣಾಮ ಬೀರಲ್ಲ- ಸಚಿವ ಹೆಚ್.ಸಿ ಮಹದೇವಪ್ಪ

ಮುಡಾ ಹಗರಣ ದಸರಾ ಆಚರಣೆ ಮೇಲೆ ಪರಿಣಾಮ ಬೀರಲ್ಲ- ಸಚಿವ ಹೆಚ್.ಸಿ ಮಹದೇವಪ್ಪ

ಮೈಸೂರು,ಆಗಸ್ಟ್,21,2024 (www.justkannada.in):  ಈ ಬಾರಿ ವಿಜೃಂಭಣೆಯಿಂದ ಮೈಸೂರು ದಸರಾ ಆಚರಣೆ ಮಾಡುತ್ತೇವೆ. ಮುಡಾ ಹಗರಣ ದಸರಾ ಆಚರಣೆ ಮೇಲೆ ಪರಿಣಾಮ ಬೀರಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ವಿಪಕ್ಷಗಳು ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಅದೇನೋ ಬೀಳುತ್ತೆ ಅಂತಾ ನರಿಯೊಂದು ಕಾಯುತ್ತಿತ್ತಂತೆ ಅದು ಬೀಳುವುದಿಲ್ಲ ಆನೆ ನಡೆಯುವುದನ್ನ ನಿಲ್ಲಿಸುವುದಿಲ್ಲ.  ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. 7 ಕೋಟಿ ಜನರ ಆಶೀರ್ವಾದ ನಮ್ಮ ಸರ್ಕಾರದ ಮೇಲಿದೆ. ನಮ್ಮಲ್ಲಿ ಯಾವ ಬೆಳವಣಿಗೆಯೂ ಆಗುತ್ತಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯರದ್ದು ಏನು ತಪ್ಪಿದೆ ಹೇಳಿ? ಎಂದು ಪ್ರಶ್ನಿಸಿದರು.

ಸಿದ್ಧರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಚ್.ಸಿ ಮಹದೇವಪ್ಪ,  ನಿಮಗ್ಯಾಕೆ ಅನುಮಾನ ಎಂದರು.

Key words: Muda scam, mysore dasara, Minister, HC Mahadevappa