Saturday, September 26, 2026

BDA Apartments

ಮುಡಾ ಹಗರಣ: ಮೈಸೂರು ಮಹಾನಗರ ಪಾಲಿಕೆ ನೌಕರ ಕೆಲಸದಿಂದ ವಜಾ BDA JK_Adv BDA Adv
Home Front Page ಮುಡಾ ಹಗರಣ: ಮೈಸೂರು ಮಹಾನಗರ ಪಾಲಿಕೆ ನೌಕರ ಕೆಲಸದಿಂದ ವಜಾ

ಮುಡಾ ಹಗರಣ: ಮೈಸೂರು ಮಹಾನಗರ ಪಾಲಿಕೆ ನೌಕರ ಕೆಲಸದಿಂದ ವಜಾ

ಮೈಸೂರು, ನವೆಂಬರ್​ 15,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಹಾಜರಾಗಿದ್ದ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ನೌಕರ ಬಿ.ಕೆ.ಕುಮಾರ್​ ನನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಬಿ.ಕೆ.ಕುಮಾರ್ ಹೆಚ್ಚುವರಿ ಕೆಲಸಕ್ಕಾಗಿ ಮುಡಾಗೆ ನೇಮಕವಾಗಿ ಬಂದಿದ್ದನು. ಮುಡಾದಲ್ಲಿ ಕೆಲಸ ಮಾಡುತ್ತಾ ಪಾಲಿಕೆಯಿಂದಲೂ ಸಂಬಳ ಪಡೆಯುತ್ತಿದ್ದನು. ಕುಮಾರ್ ಏಕಕಾಲದಲ್ಲಿ ಎರಡು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದನು ಎಂಬ ಆರೋಪ ಕೇಳಿ ಬಂದಿದೆ. ನಿಯಮ ಉಲ್ಲಂಘಿಸಿ ಎರಡು ಕಡೆ ವೇತನ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಮಾರ್​ನನ್ನು ವಜಾ ಮಾಡಲಾಗಿದೆ.

ಬಿ.ಕೆ.ಕುಮಾರ್​ನನ್ನು ವಜಾ ಮಾಡಿ ಮೈಸೂರು ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್ ಆದೇಶ ಹೊರಡಸಿದ್ದಾರೆ ಎನ್ನಲಾಗಿದೆ.

ಮುಡಾ ಕೇಸ್ ನಲ್ಲಿ ಕುಮಾರ್ ಪಾತ್ರ

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಕುಮಾರ್ ಮುಡಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಕ್ರಮಗಳಲ್ಲಿ ಭಾಗಿಯಾಗಿದ್ದ ಎಂಬ ಆರೋಪ ಕೇಳಿಬಂದಿದೆ.

Key words: Muda scam, Mysore city Corporation, employee, Dismissal