Tuesday, August 11, 2026

BDA Apartments

Home Front Page ಮುಡಾ ಹಗರಣ: ಪ್ರಾಸಿಕ್ಯೂಷನ್ ಗೆ ಸಂಪುಟದಲ್ಲಿ ಎಲ್ಲಾ ಉತ್ತರ ಕೊಟ್ಟಿದ್ದೇವೆ- ಸಿಎಂ ಸಿದ್ದರಾಮಯ್ಯ

ಮುಡಾ ಹಗರಣ: ಪ್ರಾಸಿಕ್ಯೂಷನ್ ಗೆ ಸಂಪುಟದಲ್ಲಿ ಎಲ್ಲಾ ಉತ್ತರ ಕೊಟ್ಟಿದ್ದೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಆಗಸ್ಟ್,2,2024 (www.justkannada.in): ಮುಡಾ ಹಗರಣ ಸಿಎಂ ವಿರುದ್ದ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ  ಸಿದ್ದರಾಮಯ್ಯ,  ಪ್ರಾಸಿಕ್ಯೂಷನ್ ಗೆ ಸಂಪುಟದಲ್ಲಿ ಎಲ್ಲಾ ಉತ್ತರ ಕೊಟ್ಟಿದ್ದೇವೆ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಲು ಸಚಿವ ಸಂಫುಟ ಸಭೆಯಲ್ಲಿ ನಿರ್ಧಾರ ಮಾಡಿದೆ.  ಟಿಜೆ ಅಬ್ರಾಹಂ ದೂರನ್ನ ತಿರಸ್ಕರಿಸಲು ನಿರ್ಣಯ ಮಾಡಲಾಗಿದೆ.  ಪ್ರಾಸಿಕ್ಯೂಷನ್ ಗೆ ಸಂಪುಟದಲ್ಲಿ ಉತ್ತರ ಕೊಟ್ಟಿದ್ದೇವೆ ಎಂದರು.

ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈಗ ಕೊಡಗು ಜಿಲ್ಲೆಗೆ ಹೋಗ್ತಿದ್ದೇನೆ.  ನಾಳೆ ಮೈಸೂರು ಜಿಲ್ಲೆಯಲ್ಲಿ ಪರಿಶೀಲನೆ ಮಾಡುತ್ತೇವೆ ಬಳಿಕ ರಾಮನಗರದಲ್ಲಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

Key words: Muda scam, answers, cabinet, prosecution, CM Siddaramaiah