ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಮೈಸೂರು ವಿವಿ ಬಡಾವಣೆ  ಸೇರ್ಪಡೆ ಮಾಡುವಂತೆ ಮುಡಾ ಅಧ್ಯಕ್ಷರಿಗೆ ಮನವಿ.

ಮೈಸೂರು,ಸೆಪ್ಟಂಬರ್.29,2021(www.justkannada.in):  ಮೈಸೂರು ವಿಶ್ವ ವಿದ್ಯಾನಿಲಯ ಬಡಾವಣೆಯನ್ನ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಮಾಡುವಂತೆ ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಅವರಿಗೆ ಮೈಸೂರು ವಿಶ್ವ ವಿದ್ಯಾನಿಲಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ  ಮನವಿ ಸಲ್ಲಿಸಿತು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಅವರ ಸಮ್ಮುಖದಲ್ಲಿ ಮುಡಾ ಅಧ್ಯಕ್ಷರು ಮತ್ತು  ಆಯುಕ್ತರೊಂದಿಗೆ ಸಭೆ ನಡೆಸಲಾಯಿತು. ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ತಮ್ಮ ಮನವಿಯನ್ನ ಸಲ್ಲಿಕೆ ಮಾಡಿದರು.

ಮೈಸೂರು ವಿವಿ ಬಡಾವಣೆಯನ್ನ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಮಾಡುವ ಕುರಿತು  ಮುಡಾ ಮುಂದಿನ ಮಂಡಳಿಯ ಸಭೆಯಲ್ಲಿ  ಈ ಬಗ್ಗೆ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಮುಡಾ ಅಧ್ಯಕ್ಷರು ಭರವಸೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದ ನೌಕರರ ಹೌಸಿಂಗ್ ಸೊಸೈಟಿ ಅಧ್ಯಕ್ಷ ಕೃಷ್ಣನ್ ಮಲೆಗೌಡ, ಉಪಾಧ್ಯಕ್ಷ ಮನು,  ಮೈಸೂರು ವಿಶ್ವ ವಿದ್ಯಾನಿಲಯ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾಂತರಾಜ್, ಮನೋಹರ್, ನಿವೃತ್ತ ಪ್ರಾಧ್ಯಾಪಕ ನಾಣಯ್ಯ ಉಪಸ್ಥಿತರಿದ್ದರು.

Key words: Muda -President – Mysore university-layout -Srirampur town panchayat

ENGLISH SUMMARY…

Appeal to include Mysuru University layout in to Srirampura Town Municipality
Mysuru, September 29, 2021 (www.justkannada.in): The Mysuru University Layout Residents’ Welfare Association today submitted a memorandum to the Mysore Urban Development Authority (MUDA) Chairman H.V. Rajiv, requesting inclusion of the Mysuru University layout into the Srirampura Town Municipality.
A meeting was held under the leadership of Chamundeshwari constituency MLA G.T. Devegowda, in the presence of the MUDA Chairman and Commissioner. The MUDA Chairman assured that the issue would be considered for discussion during the next MUDA meeting.
Mysuru University Employees’ Housing Society President Krishnan Malegowda, Vice-President Manu, Mysuru University Layout Residents’ Welfare Association members Kantharaj, Manohar, and others were present.
Keywords: Mysuru University Layout/ Srirampura Town Municipality/ inclusion/ MUDA