ಸಿಎಂ ಬಿಎಸ್ ವೈ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ: ಸಂಸದ ಬಚ್ಚೇಗೌಡರ ವಿರುದ್ಧ ಕ್ರಮಕ್ಕೆ ಒತ್ತಾಯ…

ಬೆಂಗಳೂರು,ಡಿ,19,2019(www.justkannada.in):  ಉಪಚುನಾವಣೆಯಲ್ಲಿ ಸೋತ ಬಳಿಕವೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸ ನೀಡುವುದನ್ನ ಮುಂದುವರೆಸಿದ್ದಾರೆ. ಸಿಎಂ ನಿವಾಸಕ್ಕೆ ಭೇಟಿ ಮುಂದುವರೆಸಿರುವ‌ ಎಂಟಿಬಿ ನಾಗರಾಜ್ ತಮ್ಮ ಸೋಲಿಗೆ ಕಾರಣರಾದ ಸಂಸದ ಬಚ್ಚೇಗೌಡರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಉಪಚುನಾವಣೆಯಲ್ಲಿ ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಸೋತರೂ ಸಹ ತಾನೂ ಸಚಿವನಾಗಬೇಕೆಂಬ ಆಸೆ ಹೊತ್ತಿರುವ ಎಂಟಿಬಿ ನಾಗರಾಜ್ ಇದಕ್ಕಾಗಿ ಪದೇ ಪದೇ ಸಿಎಂ ಬಿಎಸ್ ವೈ ಭೇಟಿ ಚರ್ಚೆ ನಡೆಸುತ್ತಿದ್ದಾರೆ.

ಅಂತೆಯೇ ಇಂದೂ ಸಹ ಸಿಎಂ ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿರುವ ಅವರು , ತಮನ್ನೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಹಾಗೆಯೇ ಉಪಚುನಾವಣೆಯಲ್ಲಿ ಮಗ ಶರತ್ ಬಚ್ಚೇಗೌಡರ ಪರ ಸಂಸದ ಬಚ್ಚೇಗೌಡರು ಕೆಲಸ ಮಾಡಿದ್ದಾರೆ, ಹೀಗಾಗಿ ಅವರ ವಿರುದ್ದ ಕ್ರಮಕ್ಕೆ ಎಂಟಿಬಿ ನಾಗರಾಜ್ ಆಗ್ರಹಿಸಿದ್ದಾರೆ.

Key words: MTB Nagaraj- visits -CM BSY residence-action –against- MP Bache Gowda.