ಡಬಲ್ ಹ್ಯಾಟ್ರಿಕ್: ಸ್ಪಿನ್ನರ್ ಕುಲದೀಪ್ ಯಾದವ್ ಹೆಗ್ಗಳಿಕೆ

ಬೆಂಗಳೂರು, ಡಿಸೆಂಬರ್ 19, 2019 (ww.justkannada.in): ಸ್ಪಿನ್ನರ್ ಕುಲದೀಪ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ಸಾಧಿಸುವ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶಾಖಪಟ್ಟಣದಲ್ಲಿ ಬುಧವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕುಲದೀಪ್ ಹ್ಯಾಟ್ರಿಕ್ ಹಾಗೂ ಮೊಹಮದ್ ಶಮಿ 3 ವಿಕೆಟ್ ಸಾಧನೆಯಿಂದ ಭಾರತ 107 ರನ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿತು.

ಕುಲದೀಪ್ ಯಾದವ್ 33ನೇ ಓವರ್ ನಲ್ಲಿ ಶಾಹಿ ಹೋಪ್, ಜೇಸನ್ ಹೋಲ್ಡರ್ ಮತ್ತು ಅಲ್ಜಾರಿ ಜೋಸೆಫ್ ಅವರ ವಿಕೆಟ್ ಗಳನ್ನು ಸತತ 3 ಎಸೆತಗಳಲ್ಲಿ ಕಿತ್ತು ಹ್ಯಾಟ್ರಿಕ್ ಸಾಧಿಸಿದರು. ಈ ಮೂಲಕ ಕುಲದೀಪ್ ಏಕದಿನ ಕ್ರಿಕೆಟ್ ನಲ್ಲಿ 2 ಬಾರಿ ಹ್ಯಾಟ್ರಿಕ್ ಸಾಧಿಸಿದ ವಿಶ್ವದ 6ನೇ ಬೌಲರ್ ಎನಿಸಿಕೊಂಡರು.