ಮೈಸೂರು ಜನತೆಗೆ ಸಿಹಿ ಸುದ್ದಿ: ಇಂಡಿಗೋ ಏರ್‌ ಲೈನ್ಸ್‌ ಗೆ ಪತ್ರ ಬರೆದ ಸಂಸದ ಯದುವೀರ್‌

ಮೈಸೂರು, ಜುಲೈ,19,2025 (www.justkannada.in) : ಸಾಂಸ್ಕೃತಿಕ ರಾಜಧಾನಿ ಮೈಸೂರಿನ ಜನರಿಗೆ ಇದು ಖುಷಿ ನೀಡುವ ಸಂಗತಿ. ಇನ್ಮುಂದೆ ಮೈಸೂರಿನಿಂದ ಮುಂಬೈ, ಚೆನ್ನೈ, ಹೈದರಾಬಾದ್‌, ಗೋವಾಗೆ ವಿಮಾನದಲ್ಲಿ ಪ್ರಯಾಣ ಮಾಡುವ ದಿನಗಳು ದೂರರವಿಲ್ಲ.

ಹೌದು, ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಗೆ ಪತ್ರ ಬರೆದಿದ್ದು ಕೂಡಲೇ ಈ ಪ್ರಮುಖ ನಗರಗಳಿಗೆ ಮೈಸೂರಿನಿಂದ ವಿಮಾನ ಸೇವೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.

ಸಾಂಸ್ಕೃತಿಕ ರಾಜಧಾನಿ ಮೈಸೂರು ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ನಗರದಿಂದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ಹೈದರಾಬಾದ್‌, ಗೋವಾಗೆ ವಿಮಾನ ಆರಂಭಿಸಿದರೆ ಉದ್ಯಮಿಗಳಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ, ಜನರಿಗೆ ಅನುಕೂಲವಾಗಲಿದೆ ಎಂದು ಸಂಸದ ಯದುವೀರ್ ಪತ್ರದಲ್ಲಿ ವಿವರಿಸಿದ್ದಾರೆ.

ಅತಿ ಶೀಘ್ರದಲ್ಲೇ ಈ ವಿಷಯದ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸ ನನಗಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್‌ ಈ ಸೇವೆಯನ್ನು ಆರಂಭಿಸುವ ಕುರಿತು ಸೂಕ್ತ ಭರವಸೆ ನೀಡಿದೆ. ಈ ವಿಮಾನ ಸೇವೆಗಳು ಆರಂಭವಾದರೆ ನಮ್ಮ ಮೈಸೂರು ಜನರಿಗೆ ಅತ್ಯಂತ ಹೆಚ್ಚು ಪ್ರಯೋಜನವಾಗಲಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ಸ್ಪಷ್ಟಪಡಿಸಿದ್ದಾರೆ.vtu

Key words: Mysore, MP, Yaduveer, letter, Indigo, Airlines