ಅಪರೇಷನ್ ಸಿಂಧೂರ: ಭಯೋತ್ಪಾದಕತೆ ತೊಡೆದು ಹಾಕುವ ನಿಟ್ಟಿನಲ್ಲಿ ದಿಟ್ಟ ನಿರ್ಧಾರ- ಸಂಸದ ಯದುವೀರ್

ಮೈಸೂರು,ಮೇ,7,2025 (www.justkannada.in): ಅಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆ ಮೇಲೆ ದಾಳಿ ನಡೆಸಿ 100ಕ್ಕೂ ಹೆಚ್ಚು ಉಗ್ರರನ್ನ ಫಿನೀಶ್ ಭಾರತೀಯ ಸೇನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು ಈ ಕುರುತು ಮಾತನಾಡಿರುವ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಶ್ವದಲ್ಲಿ ಭಯೋತ್ಪಾದಕತೆಯನ್ನ ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ದಿಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸಂಸದ ಯದುವೀರ್, ಪ್ರತಿಯೊಬ್ಬ ಭಾರತೀಯನ  ನಿರೀಕ್ಷೆಯಂತೆ ಭಾರತ ವಾಯುದಾಳಿ  ನಡೆದಿದೆ. ಭಯೋತ್ಪಾದಕ ಶಿಬಿರದ ಮೇಲೆ ದಾಳಿ ಮಾಡಿದ್ದಾರೆ. ಪಹಲ್ಗಾಮ್ ದಾಳಿಗೆ ಸೂಕ್ತ ಪ್ರತಿಕ್ರಿಯೆ ಕೊಟ್ಟಿದ್ದಾರೆ. ವಿಶ್ವದಲ್ಲಿ ಭಯೋತ್ಪಾದಕತೆಯನ್ನ ತೊಡೆದು ಹಾಕುವ ನಿಟ್ಟಿನಲ್ಲಿ ಭಾರತ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಮುಂದೆ ಇನ್ನೂ ದೊಡ್ಡ ಮಟ್ಟದ ಪ್ರತಿಕ್ರಿಯೆ ಕೊಡಲಿದ್ದಾರೆ. ಮಾಕ್ ಡ್ರಿಲ್ ಗಳು ನಡೆಯುತ್ತಿವೆ. ನಾವು ಕೂಡ ಯುದ್ದಕ್ಕೆ ಸಿದ್ದ ಇದ್ದೇವೆ. ನಮ್ಮ ನಿರೀಕ್ಷೆಯಂತೆ ಸೂಕ್ತ ಪ್ರತಿಕ್ರಿಯೆ ಕೊಟ್ಟಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ ಫೋಟೋ ಹಾಕಿ ಶಾಂತಿ ಸಂದೇಶ ಎಂದು ಕಾಂಗ್ರೆಸ್ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಯದುವೀರ್, ಇದು ಶಾಂತಿ ಸಾರುವ ಸಮಯವಲ್ಲ. ನಮ್ಮ ನಾಗರೀಕರ ಹತ್ಯೆ ಮಾಡಿದ ಉಗ್ರರಿಗೆ ಮೋದಿ ಸರಿಯಾದ ಉತ್ತರ ಕೊಟ್ಟಿದ್ದಾರೆ. ಇದರಲ್ಲಿ ರಾಜಕೀಯ ಮಾಡಬಾರದು. ಇನ್ನಾದರೂ ಪಾಕಿಸ್ತಾನ ಬುದ್ಧಿ ಕಲಿಯತ್ತ ನೋಡಬೇಕಿದೆ ಎಂದು ಹೇಳಿದರು.

Key words: Operation Sindhoora, bold decision, eradicate, terrorism,  MP Yaduveer