ಪ್ರತಾಪಸಿಂಹ v/s ರಾಮದಾಸ್ : ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ..?

 

ಮೈಸೂರು, ಮೇ 15, 2020 : (www.justkannada.in news ) ನಗರದ ಸೂಯೇಜ್ ಫಾರಂ ಯೋಜನೆಗೆ ವಿರೋಧ ವ್ಯಕ್ತ ಪಡಿಸುವವರು ಪ್ರಧಾನಿ ನರೇಂದ್ರ ಮೋದಿ ಅವರ ‘ ಸ್ವಚ್ಛ ಭಾರತ್ ‘ ಯೋಜನೆ ವಿರೋಧಿಗಳು. ಆದ್ದರಿಂದ ಈ ಯೋಜನೆಯನ್ನ ನಾನು ಜಾರಿ ಮಾಡಿಯೇ ತಿರುತ್ತೇನೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹೇಳಿಕೆ ಬಹಿರಂಗ ಸವಾಲು ಹಾಕಿದ್ದಾರೆ.

ಶುಕ್ರವಾರ ಮೈಸೂರಲ್ಲಿ  ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಪ್ರತಾಪಸಿಂಹ, ಈ ಹೇಳಿಕೆ ನೀಡುವ ಮೂಲಕ ತಮ್ಮದೇ ಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ರಾಮದಾಸ್ ವಿರುದ್ಧ ತೊಡೆ ತಟ್ಟಿದ್ದಾರೆ.

ದೀಪ ಹಚ್ಚಿದರೆ ಕರೋನಾ ವೈರಸ್ ಹೋಗುತ್ತೆ ಅಂತ. ಗಾಳಿಯಲ್ಲಿ ದುರ್ವಾಸನೆ ಹೋಗುತ್ತೆ ಎಂದು ನಂಬಿಕೊಂಡು ಕೂರುವ ರಾಜಕಾರಣಿ ನಾನಲ್ಲ ಎಂದು ವ್ಯಂಗ್ಯವಾಡುವ ಮೂಲಕ ಶಾಸಕ ಎಸ್.ಎ.ರಾಮದಾಸ್ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

mp-prathap-simha-sewage-farm-project-mla-ramdass-modi-opposer-mysore

ನಾನು ಸೂಯೇಜ್ ಫಾರಂ ವಿಚಾರದಲ್ಲಿ ಜನರಿಗೆ ಮಾತು ಕೊಟ್ಟಿದ್ದೆ. ರಾಮದಾಸ್ ಅವರು ಮಾಜಿಯಾಗಿದ್ದಾಗ ಅವರ ಪ್ರತಿಭಟನಾ ಸ್ಥಳಕ್ಕೆ ನಾನು ಭೇಟಿ ಕೊಟ್ಟಿದ್ದೆ. ಸೂಯೇಜ್ ಫಾರಂ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೆ. ಅದಕ್ಕಾಗಿ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣರ ಜೊತೆ ಸ್ಥಳ ಪರಿಶೀಲನೆ ‌ಮಾಡಿದ್ದೆ. ಜನರ ಅಭಿಪ್ರಾಯ ಸಂಗ್ರಹಿಸಿದ್ದೆವು. ಆಗ ಜನತೆ ಉಸ್ತುವಾರಿ ಸಚಿವರ ಬಳಿಯೇ ತಮ್ಮ ಸಲಹೆ ಸೂಚನೆ ನೀಡಿದ್ದರು ಎಂದು ಸಂಸದ ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.

ಜನಾಭಿಪ್ರಾಯ ಸಂಗ್ರಹಿಸೋದು ಅಂದ್ರೆ ಏನು?

ಯಾವುದಾದರೂ ಹೊಸ ಯೋಜನೆಗೆ ಜನಾಭಿಪ್ರಾಯ ಸಂಗ್ರಹಿಸೋದು ನಿಯಮ. ಆದ್ರೆ 35 ವರ್ಷದ ಸಮಸ್ಯೆಗೆ ಜನಾಭಿಪ್ರಾಯ ಸಂಗ್ರಹಿಸೋದು ಬೇಕಾ. ಈ ವಿಚಾರ ಶಾಸಕ , ಮಂತ್ರಿಯಾಗಿದ್ದ ರಾಮದಾಸ್ ಅವರಿಗೆ ಗೊತ್ತಿಲ್ವಾ?. ಒಬ್ಬ ಗ್ರಾಮಪಂಚಾಯಿತಿ ಸದಸ್ಯನಿಗೆ ಜನಾಭಿಪ್ರಾಯದ ಬಗ್ಗೆ ಗೊತ್ತಿದೆ ಅಂದ್ರೆ ರಾಮದಾಸ್ ಅವರಿಗೆ ಗೊತ್ತಿಲ್ಲವಾ? ಈ ಯೋಜನೆ ಸ್ವಚ್ಛಭಾರತ ಅಭಿಯಾನದ ಭಾಗ. ಈ ಯೋಜನೆಯನ್ನ ಮಾಡಿಯೇ ತಿರುತ್ತೇನೆ ಎಂದು ಸಂಸದ ಪ್ರತಾಪಸಿಂಹ ಹೇಳುವ ಮೂಲಕ ಕಸದ ವಿಚಾರದಲ್ಲಿ ರಾಮದಾಸ್‌ಗೆ ಸವಾಲು ಹಾಕಿದರು.

key words : mysore-bjp-mp-prathap.simha-allegation-ramdas-suage-farm

mp-prathap-simha-sewage-farm-project-mla-ramdass-modi-opposer-mysore