ಬಿಜೆಪಿ- ಜೆಡಿಎಸ್ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ ಸಂಸದ ಡಿ.ಕೆ ಸುರೇಶ್.

ಬೆಂಗಳೂರು,ಮಾರ್ಚ್,7,2024(www.justkannada.in):  ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಡಿ.ಕೆ ಸುರೇಶ್,  ಅದು ಮೈತ್ರಿಯೋ ಅಥವಾ ಒಬ್ಬರ ಕಾಲು ಮತ್ತೊಬ್ಬರ ಎಳೆಯುವುದಕ್ಕೆ ಮಾಡಿಕೊಂಡಿರುವ ಒಪ್ಪಂದವೋ ಗೊತ್ತಾಗುತ್ತಿಲ್ಲ.  ಆದರೆ ಚುನಾವಣೆಯಲ್ಲಿ ಅವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಸಿ.ಎನ್ ಮಂಜುನಾಥ್ ಅವರ ಸ್ಪರ್ಧೆ ಬಗ್ಗೆ ಚರ್ಚೆ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿದ ಡಿ.ಕೆ ಸುರೇಶ್, ನಮಗೆ ನಮ್ಮ ಕೆಲಸ ಕಾರ್ಯ ಮುಖ್ಯ, ಯಾರೇ ಅಭ್ಯರ್ಥಿ ಆದರೂ ಹೋರಾಟ ಮಾಡಬೇಕು. ಹಳೇ ವೈರಿಗಳು ಒಂದಾಗ್ತಿದ್ದಾರೋ, ಕಿತ್ತಾಡ್ತಿದ್ದಾರೋ ಗೊತ್ತಿಲ್ಲ. ಟಾರ್ಗೆಟ್ ಮಾಡೋದೆಲ್ಲವು ರಾಜಕಾರಣದಲ್ಲಿ ಸ್ವಾಭಾವಿಕ. ಇದಕ್ಕೆಲ್ಲಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಉತ್ತರ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಯಾರು ನಿಲ್ಲಬೇಕು ಅನ್ನೋದನ್ನ ಹೈಕಮಾಂಡ್ ತಿಳಿಸುತ್ತೆ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ ಹೈಕಮಾಂಡ್ ಸೂಚನೆ ಪ್ರಕಾರವೇ ನಾವು ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದರು.

Key words: MP -DK Suresh – BJP-JDS- alliance.