Thursday, August 20, 2026

BDA Apartments

Home Front Page ಸಿಎಂ ಆಗಿ 5 ವರ್ಷ ಮುಂದುವರಿಕೆ ವಿಚಾರ: ಸಿದ್ದರಾಮಯ್ಯ ಪರ ಸಚಿವ ಆರ್.ಬಿ ತಿಮ್ಮಾಪುರ ಬ್ಯಾಟಿಂಗ್.

ಸಿಎಂ ಆಗಿ 5 ವರ್ಷ ಮುಂದುವರಿಕೆ ವಿಚಾರ: ಸಿದ್ದರಾಮಯ್ಯ ಪರ ಸಚಿವ ಆರ್.ಬಿ ತಿಮ್ಮಾಪುರ ಬ್ಯಾಟಿಂಗ್.

ಬಾಗಲಕೋಟೆ,ಮಾರ್ಚ್,7,2024(www.justkannada.in):   ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದ್ದು ಈ ನಡುವೆ ಸಿಎಂ ಆಗಿ ಸಿದ್ದರಾಮಯ್ಯ ಐದು ವರ್ಷ ಮುಂದುವರೆಯುವ ಬಗ್ಗೆ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಆರ್.ಬಿ ತಿಮ್ಮಾಪುರ, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆದ್ರೆ ಬಡವರ ಕಾರ್ಯಕ್ರಮಗಳು ಬರ್ತಾವೆ.  ಚುನಾವಣೆಗೂ ಮುನ್ನ ಜನರಿಗೆ ನೀಡಿದ್ದ ಭರವಸೆಗಳನ್ನ ಈಡೇರಿಸಿದ್ದೇವೆ.  ನನ್ನ ಆಸೆ ಏನಿದೆ ಅಂದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಸಿದ್ದರಾಮಯ್ಯ ಮುಂದುವರೆದರೆ  ಇಂತಹ ಎಷ್ಟೋ ಕಾರ್ಯಕ್ರಮಗಳು ಬರ್ತಾವೆ.  ಬಡವರ, ರೈತರ ಪರ ಕಾರ್ಯಕ್ರಮಗಳು ಬರ್ತಾವೆ ಎಂದು ತಿಳಿಸಿದರು.

ಈ ಮೂಲಕ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರೆಯಲಿ ಎಂದು ಪರೋಕ್ಷವಾಗಿ ಸಚಿವ ಆರ್.ಬಿ ತಿಮ್ಮಾಪುರ ಬ್ಯಾಟ್ ಬೀಸಿದರು.

Key words: 5 years -continuation – CM- Siddaramaiah- Minister -RB Thimmapura -batting