ಕುಟುಂಬದೊಂದಿಗೆ ವೆಕೇಷನ್ ಜತೆ ‘ಗಾಳಿಪಟ-2’ ಗೆ ಲೋಕೇಷನ್ ಹುಡುಕುತ್ತಿದ್ದಾರೆ ಯೋಗರಾಜ ಭಟ್ರು !

ಬೆಂಗಳೂರು, ಮೇ 29, 2019 (www.justkannada.in): ನಿರ್ದೇಶಕ ಯೋಗರಾಜ್ ಭಟ್ ಸದ್ಯ ಕುಟುಂಬಕ್ಕೆ ವೆಕೇಷನ್ ನಲ್ಲಿ ಕಾಲ ಕಳೆಯುತ್ತಿದ್ದಾರೆ!

ಇದರಲ್ಲಿ ವಿಶೇಷ ಅಂತೀರಾ…? ಸದ್ಯ ‘ಗಾಳಿಪಟ 2’ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಯೋಗರಾಜ್ ಭಟ್ ವಿದೇಶಕ್ಕೆ ಹಾರಿದ್ದಾರೆ.

ಕುಟುಂಬ ಸಮೇತ ಕಾಲ ಕಳೆಯುತ್ತಿರುವ ಅವರು ಜತೆಗೆ ಲೋಕೇಷನ್ ಹುಡುಕಾಟವನ್ನೂ ನಡೆಸುತ್ತಿದ್ದಾರೆ. ಲಂಡನ್ ಹಾಗೂ ಸ್ಕಾಟ್ಲ್ಯಾಂಡ್’ನಲ್ಲಿ ಹೆಂಡತಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿರುವ ಅವರು ಶೂಟಿಂಗ್ ಗೆ ಜಾಗವನ್ನೂ ಹುಡುಕುತ್ತಿದ್ದಾರೆ.