ಮೇ 7ರಂದು ಮತ್ತೆ ಮೈಸೂರಿಗೆ ಪ್ರಧಾನಿ ಮೋದಿ.

ಮೈಸೂರು,ಮೇ,5,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಕಳೆದ ಒಂದು ವಾರಗಳಿಂದ ನಿರಂತರವಾಗಿ  ರೋಡ್ ಶೋ, ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ವಿಪಕ್ಷಗಳ ವಿರುದ್ಧ ವಾಕ್ಸಮರ ನಡೆಸುತ್ತಿರುವ ಪ್ರಧಾನಿ ಮೋದಿ ಇದೀಗ ಮತ್ತೆ ಮೇ 7 ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ.

ಮೇ 7ರಂದಯ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ  ಬಿಜೆಪಿ ಬೃಹತ್ ಸಮಾವೇಶ ನಡೆಯಲಿದ್ದು ಅಂದು ಸಂಜೆ 4 ಗಂಟೆಗೆ ಪ್ರಧಾನಿ ಮೈಸೂರಿಗೆ ಆಗಮಿಸಲಿದ್ದಾರೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿದ ಬಿಜೆಪಿ ಮುಖಂಡ‌ ಮೈವಿ ರವಿಶಂಕರ್, ಪ್ರಧಾನಿ ಮೋದಿ ಅವರು ಮೈಸೂರು – ಚಾಮರಾಜನಗರ ಜಿಲ್ಲೆಗಳ ಅಭ್ಯರ್ಥಿ ಪರ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಜನರು ಬರುತ್ತಿದ್ದಾರೆ. ಒಂದು ಲಕ್ಷ ಜನ ಈ ಬೃಹತ್ ಪ್ರಚಾರ ಸಭೆಗೆ ಆಗಮಿಸುತ್ತಿದ್ದಾರೆ. ಎಂದು ತಿಳಿಸಿದರು.

ನಂಜನಗೂಡಿನ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಬೃಹತ್ ರ್ಯಾಲಿ ಹಮ್ಮಿಕೊಳ್ಳಲಾಗಿದ್ದು, 2 ಸಾವಿರ ಬೈಕ್‌ ಗಳ ಮೂಲಕ ಯುವಕರು ಬರುತ್ತಿದ್ದಾರೆ. ಎಸ್‌ಪಿಜಿ ಸೂಚನೆಯಂತೆ ಭದ್ರತೆಗೆ ಸಿದ್ದತೆ ಆಗಿದೆ. ನೇರವಾಗಿ ಪ್ರಚಾರ ಸಭೆಯ ಒಂದು ಕಿ.ಮೀ ವ್ಯಾಪ್ತಿಯಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಲಿದೆ ಎಂದು ಮೈವಿ ರವಿಶಂಕರ್ ತಿಳಿಸಿದರು.

Key words: Prime Minister –Modi- will -return – Mysore – May 7.