ಜೆಡಿಎಸ್ ಮುಗಿದೇ ಹೋಯ್ತು ಎಂದವರಿಗೆ ಟಾಂಗ್ ಕೊಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು.

ಮಂಡ್ಯ,ಮೇ,5,2023(www.justkannada.in): ಜೆಡಿಎಸ್ ಮುಗಿದೆ ಹೋಯ್ತು ಅಂತ ಇತ್ತೀಚೆಗೆ ಒಬ್ಬರು ಹೇಳುತ್ತಿದ್ದರು. ಅವರ ಮಾತನ್ನ ಕೇಳಿದರೆ ನನ್ನ ರಕ್ತ ಕುದಿಯುತ್ತದೆ. ಏನು ಜೆಡಿಎಸ್ ಮುಗಿದೆ ಹೋಯಿತೇ? ನನ್ನ ಮಂಡ್ಯ ಜಿಲ್ಲೆಯಲ್ಲಿ 7 ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲೇಬೇಕು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕು ಎನ್ನುವ ಮೂಲಕ ಸಚಿವ ಕೆ.ಸಿ ನಾರಾಯಣಗೌಡರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟಾಂಗ್ ನೀಡಿದರು.

ಜಿಲ್ಲೆಯ ಕೆ.ಆರ್​.ಪೇಟೆಯಲ್ಲಿ ಪ್ರಚಾರಸಭೆಯಲ್ಲಿ ಮಾತ ಮಾತನಾಡಿದ  ಹೆಚ್.ಡಿ ದೇವೇಗೌಡರು, ಮಂಡ್ಯ ಜಿಲ್ಲೆ ಕೆ.ಆರ್​.ಪೇಟೆಗೆ ನೀರು ತಂದು ಕೊಟ್ಟಿದ್ದು ಯಾರು…?  ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಮಂಡ್ಯದ ಎಲ್ಲಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ  ಕೊಟ್ಟಿದ್ದು ನಾನೇ. ಕಾಶ್ಮೀರಕ್ಕೆ ಹೋಗಬಾರದು ಎಂದು ಹೇಳಿದ್ದರೂ ನಾನು 3 ಬಾರಿ ಹೋಗಿದ್ದೆ. ಆದರೆ ನನ್ನನ್ನು ಯಾವ ಮುಸ್ಲಿಮರೂ ಸಾಯಿಸಲಿಲ್ಲ. ಮುಸ್ಲಿಂ ಬಾಂಧವರು ಯಾವಾಗಲೂ ನನ್ನ ಜೊತೆಯೇ ಇದ್ದಾರೆ ಎಂದು ಹೆಚ್.ಡಿಡಿ ತಿಳಿಸಿದರು.

Key words: Former PM-HD Deve Gowda – tong -said -JDS -over