ಮೈವಿವಿ ಘಟಿಕೋತ್ಸವ ಭಾಷಣ: ಕನ್ನಡ ಸಾಹಿತಿ ಹೆಸರು ಉಲ್ಲೇಖಿಸಿ ಶಿಕ್ಷಣದ ಮಹತ್ವ ಹೇಳಿದ ಮೋದಿ

ಮೈಸೂರು, ಅಕ್ಟೋಬರ್ 19, 2020 (www.justkannada.in): ಮೈಸೂರು ವಿವಿ 100ನೇ ಘಟಿಕೋತ್ಸವದಲ್ಲಿ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಶಿಕ್ಷಣವೇ ಬೆಳಕು’ ಉಕ್ತಿಯನ್ನು ಕನ್ನಡದಲ್ಲೇ ಉಲ್ಲೇಖಿಸಿದ ಮೋದಿ ಶಿಕ್ಷಣದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.

ಮೈಸೂರು ವಿವಿ ಇತಿಹಾಸ, ಶ್ರೀಮಂತಿಕೆ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಂಡಾಡಿದರು.

ಪದವಿ ಪಡೆದ ಸಂಭ್ರಮದಲ್ಲಿರುವ ಮೈವಿವಿ ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಶುಭಾಶಯ ಕೋರಿ ಪ್ರಧಾನಿ ಮೋದಿ, ಉನ್ನತ ಶಿಕ್ಷಣದ ಮಹತ್ವದ ಕುರಿತು ತಮ್ಮ ಘಟಿಕೋತ್ಸವ ಭಾಷಣದುದ್ದಕ್ಕೂ ಸಾಕಷ್ಟು ಸಲಹೆ, ಸೂಚನೆಗಳನ್ನು ನೀಡಿದರು.