ಮೈಸೂರು ವಿವಿ ಘಟಿಕೋತ್ಸವ ಭಾಷಣ: ದಸರಾ ಶುಭಾಶಯ ಕೋರಿದ ಮೋದಿ

ಮೈಸೂರು, ಅಕ್ಟೋಬರ್ 19, 2020 (www.justkannada.in): ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಭಾಷಣ ಮಾಡುತ್ತಿದ್ದಾರೆ.

ಘಟಕೋತ್ಸವ ಭಾಷಣದ ಆರಂಭದಲ್ಲೇ ನಾಡ ಹಬ್ಬ ಮೈಸೂರು ದಸರಾ ಉತ್ಸವ ಶ್ರೀಮಂತಿಕೆಯನ್ನು ಕೊಂಡಾಡಿದ ಪ್ರಧಾನಿ ಮೋದಿ ಅವರು ದಸರಾ ಶುಭಾಶಯ ಕೋರಿದರು.

ಇದೇ ವೇಳೆ ಮೈಸೂರು ವಿವಿ ಇತಿಹಾಸವನ್ನು ಶ್ಲಾಘಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯನ್ನು ಕೊಂಡಾಡಿದ ಮೋದಿ ಕೊರೊನಾ ಹಿನ್ನೆಲೆಯಲ್ಲಿ ಘಟಿಕೋತ್ಸವ ವರ್ಚವಲ್ ಆಗಿ ನಡೆಯುತ್ತಿರುವುದಕ್ಕೆ ಕೊಂಚ ಬೇಸರ ವ್ಯಕ್ತಪಡಿಸಿದರು.