ಮನ್ ಕಿ ಬಾತ್’ನಲ್ಲಿ ಚಂದ್ರಯಾನ-3 ಯಶಸ್ಸಿನ ನಾರಿ ಶಕ್ತಿ ಬಗ್ಗೆ ಮೋದಿ ಮಾತು!

ಬೆಂಗಳೂರು, ಆಗಸ್ಟ್ 27, 08,2023 (www.justkannada.in): ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಚಂದ್ರಯಾನ-3 ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.

ಚಂದ್ರಯಾನ 3 ರಲ್ಲಿ ಹಲವು ಮಹಿಳಾ ವಿಜ್ಞಾನಿಗಳು ಹಾಗೂ ಎಂಜಿನಿಯರ್​ಗಳು ಕೆಲಸ ಮಾಡಿದ್ದಾರೆ. ಅಸಾಧ್ಯವಾದುದ್ದನ್ನು ಸಾಧ್ಯವೆಂದು ತೋರಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಮಿಷನ್ ಚಂದ್ರಯಾನವು ಮಹಿಳಾ ಶಕ್ತಿಯ ಜೀವಂತ ಉದಾಹರಣೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ನೇರವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಅಂದಹಾಗೆ ಮನ್ ಕಿ ಬಾತ್ ಕಾರ್ಯಕ್ರಮ ಮೋದಿಯವರ ಸರಣಿಯಾಗಿದ್ದು, ದೇಶಾದ್ಯಂತ ಸ್ಪೂರ್ತಿದಾಯಕ ಜೀವನ ಪ್ರಯಾಣಗಳು, ರಾಷ್ಟ್ರಗಳಲ್ಲಿನ ಪ್ರಸ್ತುತ ಬೆಳವಣಿಗೆಗಳು, ಸಾಧನೆಗಳ ಕುರಿತು ಮಾತನಾಡುತ್ತಾರೆ.