ಮೋದಿ ಕೆಲಸ ಮಾಡಿದ್ರೆ ಪ್ರಚಾರ ಏಕೆ.? ಎಂದ ಸಂತೋಷ್ ಲಾಡ್ ಗೆ ಪ್ರಹ್ಲಾದ್ ಜೋಶಿ ತಿರುಗೇಟು.

ಧಾರವಾಡ,ಏಪ್ರಿಲ್,6,2024 (www.justkannada.in): ಮೋದಿ ಅವರು ಕೆಲಸ ಮಾಡಿದ್ದರೇ ಪ್ರಚಾರ ಏಕೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಸಚಿವ ಸಂತೋಷ್ ಲಾಡ್ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಲ್ಲಿಯ ಸಂತೋಷ ಲಾಡ್ ಎಲ್ಲಿಯ ಮೋದಿ.  ಪ್ರಧಾನಿ ಮೋದಿ ಮತ್ತು  ನನಗೆ ಸಂತೋಷ್ ಲಾಡ್ ಬೈಯುತ್ತಿದ್ದಾರೆ  ಬೈದರೆ ಮಾತ್ರ ನಿಮ್ಮನ್ನ ಮಂತ್ರಿ ಮಾಡುತ್ತೇವೆ  ಎಂದು ಸಿಎಂ ಹೇಳಿರಬಹುದು. ಸಂತೋಷ್ ಲಾಡ್ ಅವರೇ ನಿಮ್ಮ ಮಕ್ಕಳು ರಾಹುಲ್ ಗಾಂಧಿ ಥರ ಆಗಬೇಕಾ..? ಪ್ರಧಾನಿ ಮೋದಿ ತರ ಆಗಬೇಕಾ..? ಎಂದು ಕುಟುಕಿದರು.

ನಾವು ಎಲ್ಲಾ ಎಂಪಿಗಳು ಸೇರಿ ಮೋದಿಯೇ ಪ್ರಧಾನಿ ಎಂದು ಘೋಷಿಸಿದ್ದೇವೆ .  ಜಿಗಿ ಜಿಗಿದು ಮಾತಾಡ್ತೀರಲ್ವಾ ನಿಮ್ಮ ನಾಯಕ ಯಾರು..?  ಎಂದು ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟರು.

Key words: Modi, Prahlad Joshi, Santosh Lad.