Sunday, August 23, 2026

BDA Apartments

Home Front Page ವೋಟ್ ಪಡೆಯಲು ಮೋದಿ, ಬಿಎಸ್ ವೈ, ಮುಖ ತೋರಿಸುತ್ತೀರಿ: ಹಾಗಾದ್ರೆ ನಿಮ್ಮ ಕೊಡುಗೆ ಏನು..? ಮತ್ತೆ...

ವೋಟ್ ಪಡೆಯಲು ಮೋದಿ, ಬಿಎಸ್ ವೈ, ಮುಖ ತೋರಿಸುತ್ತೀರಿ: ಹಾಗಾದ್ರೆ ನಿಮ್ಮ ಕೊಡುಗೆ ಏನು..? ಮತ್ತೆ ಗುಡುಗಿದ ಎಂ.ಪಿ ರೇಣುಕಾಚಾರ್ಯ.

ಬೆಂಗಳೂರು,ಜುಲೈ,1,2023(www.justkannada.in):   ಮತ ಪಡೆಯಲು ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮುಖ ತೋರಿಸುತ್ತೀರಿ. ಹಾಗಾದರೇ ರಾಜ್ಯಕ್ಕೆ ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ಸ್ವಪಕ್ಷದವರ ವಿರುದ್ದ ಮತ್ತೆ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ,  ನನ್ನ ಹೋರಾಟ, ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಮಗೆ ಅಪಮಾನ ಮಾಡಿದ್ರೆ ಸುಮ್ಮನಿರಲ್ಲ ಎಂದು ಬಿಎಸ್ ವೈಗೆ ಹೇಳಿದೆ. ಬಿಎಸ್ ವೈರಿಗೆ  ವಯಸ್ಸಾಗಿದೆ ಎಂದು ಹೇಳಿ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರಿ. ಹಾಗಾದರೇ ರಾಜ್ಯಪ್ರವಾಸ ಮಾಡಲು ಬಿಎಸ್ ವೈ ಬೇಕು ವೋಟ್ ಕೇಳಲು ಬಿಎಸ್ ವೈ ಬೇಕು.  ಹಾಗಾದರೆ ರಾಜ್ಯಕ್ಕೆ, ಪಕ್ಷಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಬಿಎಸ್ ವೈ ಮಾತಿಗೆ ಗೌರವ ಕೊಡುತ್ತೇನೆ. ಇನ್ನು ಮುಂದೆ ನಾನು ಎಲ್ಲವನನ್ನೂ ಬಹಿರಂಗವಾಗಿ ಮಾತನಾಡಲ್ಲ. ನನಗೆ ಬಿಎಸ್ ವೈ, ಪ್ರಧಾನಿ ಮೋದಿ, ಪಕ್ಷದ ಆಶೀರ್ವಾದವಿದೆ ಯಾರಿಗೂ ಹೆದರಲ್ಲ ನನ್ನನ್ನ ತುಳಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ವಪಕ್ಷದ ಕೆಲ ನಾಯಕರಿಗೆ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದರು.

Key words: Modi- BSY- face – votes-your- contribution-Former MLA- MP Renukacharya