Tuesday, August 18, 2026

BDA Apartments

Home Front Page ಸ್ವಪಕ್ಷದ ಜನಾಶೀರ್ವಾದ ಯಾತ್ರೆ ವಿರುದ್ಧವೇ ಎಂಎಲ್ಸಿ ವಿಶ್ವನಾಥ್ ಅಸಮಾಧಾನ

ಸ್ವಪಕ್ಷದ ಜನಾಶೀರ್ವಾದ ಯಾತ್ರೆ ವಿರುದ್ಧವೇ ಎಂಎಲ್ಸಿ ವಿಶ್ವನಾಥ್ ಅಸಮಾಧಾನ

ಮೈಸೂರು, ಆಗಸ್ಟ್ 22, 2021 (www.justkannada.in): ಸ್ವಪಕ್ಷದ ಜನಾಶೀರ್ವಾದ ಯಾತ್ರೆ ವಿರುದ್ಧವೇ ಎಂಎಲ್ಸಿ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮದೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಎಲ್ಲಾ ರಾಜಕೀಯ ಸಭೆ, ಸಮಾರಂಭ, ಮೆರವಣಿಗೆಗಳನ್ನ ಸ್ಥಗಿತಗೊಳಿಸಬೇಕು. ಕೋವಿಡ್ ಹರಡಲು ಇದೇ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಜನ ಗುಂಪಾಗಿ ಸೇರುವ ಕಾರ್ಯಕ್ರಮಗಳನ್ನ ಬಿಡಿ. ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ಕಂಟ್ರೋಲ್ ಆಗಲ್ಲ. ಶಾಲಾ ಕಾಲೇಜುಗಳು ಆರಂಭವಾಗುವುದರಿಂದ ಕೋವಿಡ್ ಹರಡಲ್ಲ ಎಂದಿದ್ದಾರೆ.

ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಂದಲೇ ಸಮಸ್ಯೆ ಹೆಚ್ಚು. ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ವಹಿಸಿ ಎಂದು ಮೈಸೂರಿನಲ್ಲಿ ಎಂಎಲ್ಸಿ ವಿಶ್ವನಾಥ್ ತಿಳಿಸಿದ್ದಾರೆ.