Sunday, August 23, 2026

BDA Apartments

Home Front Page ಮಂಡ್ಯ ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ ಎಂಎಲ್ಸಿ ಶ್ರೀಕಂಠೇಗೌಡ

ಮಂಡ್ಯ ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ ಎಂಎಲ್ಸಿ ಶ್ರೀಕಂಠೇಗೌಡ

ಮಂಡ್ಯ ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ ಎಂಎಲ್ಸಿ ಶ್ರೀಕಂಠೇಗೌಡಪ್ರಿಲ್ 30, 2020 (www.justkannada.in): ವಿಧಾನಪರಿಷತ್ ಸದಸ್ಯ ಶ್ರೀಕಂಠೇಗೌಡ ಪತ್ರಕರ್ತರ ವಿರುದ್ಧ ದೂರು ನೀಡಿದ್ದಾರೆ.

ನಗರದಲ್ಲಿ ಇತ್ತೀಚೆಗೆ ಪತ್ರಕರ್ತರಿಗೆ ಕೋರೋನಾ ಟೆಸ್ಟ್ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಶ್ರೀಕಂಠೇಗೌಡ ಅವರು ನಾಲ್ವರು ಪತ್ರಕರ್ತರ ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ.

ತಾವು ಹಾಗೂ ತಮ್ಮ ಪುತ್ರ ಕೃಷಿಕ್ ಗೌಡ ಮತ್ತು ಬೆಂಬಲಿಗರ ಮೇಲೆ ನಾಲ್ವರು ಪತ್ರಕರ್ತರು ಹಲ್ಲೆ ಮಾಡಿರುವುದಾಗಿ ಶ್ರೀಕಂಠೇಗೌಡ ಆರೋಪಿಸಿದ್ದು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಾಲ್ವರು ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೊರೋನಾ ಟೆಸ್ಟ್ ಮಾಡುವ ಸಂದರ್ಭದಲ್ಲಿ ಶ್ರೀಕಂಠೇಗೌಡ ಮತ್ತು ಕೃಷಿಕ್ ಗೌಡ ಗಲಾಟೆ ಮಾಡಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಈಗ ಪ್ರತಿದೂರು ದಾಖಲಾಗಿದೆ.