ಹೆಚ್.ವಿಶ್ವನಾಥ್‍ ವಿರುದ್ಧ ಗುಡಗಿದ ರಾಜ್ಯದ ವಿವಿಧ ನಿಗಮ ಮಂಡಳಿ ಅಧ್ಯಕ್ಷರು.

ಬೆಂಗಳೂರು,ಜೂನ್,18,2021(www.justkannada.in): ಸರ್ಕಾರ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿ ಭ್ರಷ್ಟಾಚಾರ ಆರೋಪ ಮಾಡಿದ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ ರಾಜ್ಯ ವಿವಿಧ ನಿಗಮ ಮಂಡಳಿಯ ಅಧ್ಯಕ್ಷರು ಗುಡುಗಿದ್ದಾರೆ.jk

ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಅಭಿವೃದ್ಧಿ ನಿಯಮಿತ ಅಧ್ಯಕ್ಷರಾದ ಎಂ ರುದ್ರೇಶ್, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ  ಆರ್‍ ರಘು ಕೌಟಿಲ್ಯ, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬು ಪತ್ತಾರ್, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷ ಗಿರೀಶ್‍ಉಪ್ಪಾರ್,  ಕರ್ನಾಟಕ ಮೃಗಾಲಯ ಪ್ರಾಧಿಕಾರ ಮೈಸೂರು ಅಧ್ಯಕರಾದ ಎಲ್‍ಆರ್ ಮಹದೇವಸ್ವಾಮಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಉಪಾಧ್ಯಕ್ಷ ಈಶ್ವರ್, ಮಾರ್ಕೆಟಿಂಗ್‍ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್  ಅಧ್ಯಕ್ಷ ಸಿ ಮುನಿಕೃಷ್ಣ ಸೇರಿ  ಹಲವು ನಿಗಮ ಮಂಡಳಿ ಅಧ್ಯಕ್ಷರು ಹೆಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಜೆಡಿಎಸ್‍ ತೊರೆದು ಶಾಸಕತ್ವಕ್ಕೆ ರಾಜೀನಾಮೆ ನೀಡುವಾಗ ಬಿ.ಎಸ್‍ ಯಡಿಯೂರಪ್ಪನವರ ವಯಸ್ಸು, ಉತ್ಸಾಹ ನಿಮ್ಮ ಸಮಯ ಸಾಧಕತನದ ಮಬ್ಬಿನಕಣ್ಣಿಗೆ ಏಕೆ ಕಾಣಲಿಲ್ಲ ? ನಿಮ್ಮ ಆರೋಪ ಟೀಕೆಗಳು ಹತಾಶೆ ಹಾಗೂ ಮಾನಸಿಕ ಸ್ತಿಮಿತತೆಯ ಅಸ್ತಿತ್ವ ಕಳೆದುಕೊಂಡಿರುವುದನ್ನು ಬಹಿರಂಗಪಡಿಸುತ್ತಿದೆ.

ಇಂಜಿನಿಯರ್‍ ಅಳಿಯನಿಗೆ ಆಯಾಕಟ್ಟಿನ ಹುದ್ದೆಗಳನ್ನು ಕೊಡಿಸುವುದಕ್ಕಾಗಿ, ನಿಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿ, ನಿಮ್ಮ ನೆಂಟರಿಷ್ಟರಿಗೆ ಕಾಂಟ್ಯ್ರ್ರಾಕ್ಟ್‍ ಕೊಡಿಸುವುದಕ್ಕಾಗಿ ನಿಮ್ಮಇಡೀ ರಾಜಕೀಯ ಜೀವನ ಮೀಸಲಾಗಿರಿಸಿದ್ದೀರಿ ಎಂಬ ವಾಸ್ತವ ಸಂಗತಿ ಕೆ.ಆರ್ ನಗರದಿಂದ ಪ್ರಾರಂಭವಾಗಿ ಹುಣಸೂರು ಹಾದಿಯಾಗಿ ಮೈಸೂರುಜಿಲ್ಲೆಯನ್ನು ಸುತ್ತುವರೆದು ರಾಜಧಾನಿ ಬೆಂಗಳೂರಿನಲ್ಲಿ ಮಾರ್ದನಿಸುತ್ತಿರುವುದಕ್ಕೆ ನಾವು ಸಾಕ್ಷಿಒದಗಿಸಬಲ್ಲೆವು.ಇಂಥಾ ಹಿನ್ನೆಲೆಯ ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವ ನೈತಿಕತೆಇದೆ ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಸ್ವಾರ್ಥ  ಮತ್ತು ಸ್ವಜನ ಪಕ್ಷಪಾತಕ್ಕೆ ರಾಜಕೀಯ ಕ್ಷೇತ್ರವನ್ನು ಮೀಸಲಾಗಿರಿಸಿಕೊಂಡಿದ್ದೀರಿ.”ಬಗ್ಗಿದರೆ ಜುಟ್ಟು ಹಿಡಿಯುವುದು, ಎದ್ದರೆ ಕಾಲು ಎಳೆಯುವ ನೈತಿಕ ದಿವಾಳಿತನದ ರಾಜಕಾರಣ ಕಂಡು ಮರುಕಪಡಲೂ ಅಸಹ್ಯ ವೆನಿಸುತ್ತಿದೆ.

ದೇವರಾಜ ಅರಸರಿಂದ ಅಧಿಕಾರದ ಭಿಕ್ಷೆ ಪಡೆದ ನೀವು ಅವರ ಬೆನ್ನಿಗೇ ಇರಿದು ಉಂಡ ಮನೆಗೆ ದ್ರೋಹ ಬಗೆವ ವಿದ್ರೋಹಿ ಸಂಸ್ಕøತಿಯನ್ನು ಅಂದೇ ಆರಂಭಿಸಿದಿರಿ, ಮುಂದುವರಿದ ಭಾಗವಾಗಿ ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ, ಇದೀಗ ರಾಜಕೀಯದಲ್ಲಿ ಪಾತಾಳಕ್ಕೆ ಬಿದ್ದಿದ್ದ ನಿಮ್ಮನ್ನು ಕನಿಕರದಿಂದ ಮೇಲೆತ್ತಿ ವಿಧಾನ ಪರಿಷತ್ ಸ್ಥಾನ ಕರುಣಿಸಿದ ಬಿಜೆಪಿ ಹಾಗೂ ಯಡಿಯೂರಪ್ಪನವರ ವಿಶ್ವಾಸದ ಹೃದಯಕ್ಕೆ ಘಾತುಕತನದಿಂದ ಇರಿಯುವ ದೂರ್ತತನ ಪ್ರದರ್ಶಿಸುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಮಾತನಾಡುತ್ತಿರುವ ನಿಮಗೆಷ್ಟು ವಯಸ್ಸು ? ನೀವೊಬ್ಬ ಆದರ್ಶ ಪ್ರತಿಪಾದಿಸುವ ವ್ಯಕ್ತಿತ್ವದವರೇ ಆಗಿದ್ದರೆ‘ಬೆನ್ನುಹತ್ತಿದ ಬೇತಾಳದಂತೆ ಪರಿಪರಿಯಾಗಿಅಂಗಲಾಚಿ’ ಸಾಹಿತ್ಯಕ್ಷೇತ್ರದ ಧೀಮಂತರಿಗೆ ದಕ್ಕಬೇಕಾಗಿದ್ದ ವಿಧಾನ ಪರಿಷತ್ ಸದಸ್ಯತ್ವವನ್ನು‘ಇನ್ನೊಬ್ಬರಿಂದ ಬರೆಸಿಕೊಂಡ ಒಂದೆರಡು ಕಳಪೆ ಪುಸ್ತಕಗಳನ್ನು ಮುಂದಿಟ್ಟುಕೊಂಡು ಸಾಹಿತಿ ಎಂಬ ಹಣೆಪಟ್ಟಿ ಹಚ್ಚಿಕೊಂಡು’ ಎಂಎಲ್‍ಸಿ ಸ್ಥಾನವನ್ನುಕಸಿದುಕೊಂಡಿದ್ದನ್ನು ಈ ರಾಜ್ಯದಜನತೆ ಹಾಗೂ ಸಾಹಿತ್ಯವಲಯ ಮರೆಯಲು ಸಾಧ್ಯವಿಲ್ಲ.

ನಿಮ್ಮ ಮಾತಿಗೂ ಕೃತಿಗೂ ಯಾವುದೇ ಸಂಬಂಧವಿಲ್ಲದ ವ್ಯಕ್ತಿತ್ವ ನಿಮ್ಮದು ಎಂಬುವುದನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದಿದೆ. ನಿಮಗೆ ನೈತಿಕತೆಎಂಬುದು ಇದ್ದದ್ದೇ ಆಗಿದ್ದಲ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ನೀವು ಸಕ್ರಿಯರಾಜಕಾರಣದಿಂದ ದೂರ ಉಳಿದು ಯುವಕರನ್ನು ಉತ್ತೇಜಿಸಬೇಕಾಗಿತ್ತು, ಅರ್ಹರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನುಕೊಡಿಸಲು ವಕಾಲತ್ತು ವಹಿಸಬೇಕಿತ್ತು. ಇಂತಹ ಯಾವ ಉದಾರತೆಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳದ ನೀವು ಯಾವ ಮುಖವಿಟ್ಟುಕೊಂಡು ಬಿ.ಎಸ್‍ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುತ್ತೀರಿ?

ಬಿ.ವೈ ವಿಜಯೇಂದ್ರಅವರು ಸ್ವಸಾಮಥ್ರ್ಯದ ಅಪರೂಪದ ಸಂಘಟನಾಚತುರ.  ಈ ಹಿನ್ನೆಲೆಯಲ್ಲಿ ಪಕ್ಷ ಅವರನ್ನು ಗುರುತಿಸಿ ಸ್ಥಾನ ನೀಡಿದೆ ಜನತೆ ಅವರನ್ನು ಮೆಚ್ಚಿಒಪ್ಪಿದ್ದಾರೆ. ಚುನಾವಣಾಕಾರ್ಯದ ಜವಾಬ್ದಾರಿ ಹೊತ್ತಾಗ ಅವರನ್ನು ಅಪ್ಪಿ ಆಶೀರ್ವದಿಸಿದ್ದಾರೆ.

ಬಿಜೆಪಿ ಮತ್ತು ಯಡಿಯೂರಪ್ಪನವರಿಂದ ಪಡೆದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಭಿಕ್ಷೆಯನ್ನು ರಾಜೀನಾಮೆ ಮೂಲಕ ಹಿಂದಿರುಗಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವೇ ಬಿಜೆಪಿಯಿಂದ ಹೊರದೂಡುವ ಅಪಮಾನದ ಕ್ಷಣಗಳನ್ನು ಎದುರಿಸಲು ಸಿದ್ದರಾಗಿ ಎಂದು ಟಾಂಗ್ ನೀಡಿದ್ದಾರೆ.

ಹಾಗೆಯೇ ವಿಶ್ವನಾಥರೇ, ಕಳೆದ ಕೆಲ ದಿನಗಳಿಂದ  ಯಡಿಯೂರಪ್ಪನವರು ಹಾಗೂ ಬಿಜೆಪಿ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಹಾಗೂ ಆರೋಪಗಳು ‘ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ’ಆಗುತ್ತಿದೆ. ನೀವೊಬ್ಬ ಬಿಜೆಪಿಯೂಅಲ್ಲ, ಕಾಂಗ್ರೆಸ್ ಅಲ್ಲ, ದಳವೂ ಅಲ್ಲ. ಬದಲಾಗಿ ನೀವೊಬ್ಬ‘ರಾಜಕೀಯ ವ್ಯಾಪಾರಿ’ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಟೀಕಿಸಿದರು.

Key words: mlc-H. Vishwanath—State- Board Corporations- Chairman -outrage