ಮೈಸೂರು,ಜನವರಿ,28,2021(www.justkannada.in): ನನಗೆ ಸಚಿವರ ಬಾಯಿ ಮಾತಿನ ಸಹಾನುಭೂತಿ ಬೇಕಿಲ್ಲ. ನಮ್ಮ 17 ಮಂದಿಯ ಟೀಂ ಸಿಎಂ ಬಳಿ ಮಾತನಾಡಬೇಕಿತ್ತು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮೈಸೂರು ಜಿಲ್ಲೆ ನಾಗಾಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್,  ನಮ್ಮ 17 ಮಂದಿ ಟೀಂ ಸಿಎಂ ಜತೆ ಮಾತನಾಡಬೇಕಿತ್ತು. ಅದನ್ನ ಬಿಟ್ಟು ಅವರ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ. ಆದರೂ ಒಬ್ಬಂಟಿಯಲ್ಲ ಎಂದು ಹೇಳಿದ್ದಕ್ಕೆ ಅವರನ್ನು ಅಭಿನಂದಿಸುವೆ ಎಂದು ತಿಳಿಸಿದರು.
ನಮ್ಮ 17 ಜನರ ಟೀಂ ಎಲ್ಲರೂ ಜತೆಯಲ್ಲಿಯೇ ಇದ್ದೇವೆ. ಅವರೆಲ್ಲ ಮಂತ್ರಿಯಾಗಿದ್ದಾರೆ. ಅದೆಲ್ಲಾ ಇಲ್ಲಿ ಪವರ್ ಪಾಲಿಟಿಕ್ಸ್ ಬಿಡಿ ಎಂದು ಹೆಚ್.ವಿಶ್ವನಾಥ್ ಟೀಕಿಸಿದರು.
Key words: MLC -H Vishwanath – I don’t –need- minister’s- sympathy -mysore
 
            