ಮೈಸೂರು, ಜುಲೈ,31,2025 (www.justkannada.in): ಅಧಿಕಾರಿಗಳು ರೈತರನ್ನು ಕಛೇರಿಯಿಂದ ಕಛೇರಿಗೆ ಅಲೆಸದೆ ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ವರುಣಾ ಕ್ಷೇತ್ರದ ಡಣಾಯಕನಪುರ, ಕೂಡೂರು, ಮನ್ನೆಹುಂಡಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರ ಕೆಲಸಗಳು ತ್ವರಿತಗತಿಯಲ್ಲಿ ಆಗಬೇಕೆಂದು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿದ್ದೇನೆ. ಸ್ಥಳೀಯವಾಗಿ ಬಗೆಹರಿಸಬಹುದಾದ ಸಣ್ಣಪುಟ್ಟ ಸಮಸ್ಯೆಗಳನ್ನು ಸ್ಥಳದಲ್ಲಿ ಬಗೆಹರಿಸಲಾಗುವುದು. ಉಳಿದ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದ ಅವರು ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ ಆದ್ದರಿಂದಲೇ ರಾಜ್ಯದ ಜನರ ತಲಾ ಆಧಾಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಡಣಾಯಕನಪುರದಲ್ಲಿ ನ್ಯಾಯಬೆಲೆ ಅಂಗಡಿ ಸಮಸ್ಯೆ ಹೇಳಿದ್ದೀರಿ. ಗ್ರಾಮಸ್ಥರು ಯಾರಿಗೆ ಹೇಳುತ್ತಿರೋ ಅವರಿಗೆ ಮಾಡಿಕೊಡೋಣ. ಗಂಗಾ ಕಲ್ಯಾಣ ಕೇಳಿದ್ದೀರಿ. ಮುಖ್ಯಮಂತ್ರಿಗಳ ಪರಿಹಾರ ನಿಧಿ, ಫಂಡ್ ಕೇಳಿದ್ದೀರಿ ಮಾಡೋಣ ಎಂದರು. ಮನ್ನೆಹುಂಡಿಗೆ ಕೆರೆ ರಸ್ತೆ ಅಭಿವೃದ್ಧಿ, ಚರಂಡಿ ಅಭಿವೃದ್ಧಿ, ಕನಕಭವನಕ್ಕೆ ಅನುದಾನ, ಸ್ಮಶಾನಕ್ಕೆ 1 ಎಕರೆ ಜಾಗ ಕೇಳಿದ್ದೀರಿ ಎಲ್ಲವನ್ನು ಮಾಡಿಕೊಡುತ್ತೇವೆ. ಸಮತಾ ಟ್ರಸ್ಟ್ ವತಿಯಿಂದ ದಿವಂಗತ ರಾಕೇಶ್ ಸಿದ್ದರಾಮಯ್ಯರವರ ಸ್ಮರಣಾರ್ಥ ವರುಣಾ ಕ್ಷೇತ್ರದ ರೈತರಿಗೆ 5 ಸಾವಿರ ಸಸಿಗಳನ್ನು ವಿತರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುರೇಶಚಾರ್, ಗ್ರಾ.ಪಂ. ಅಧ್ಯಕ್ಷೆ ನಾಗರತ್ನಮ್ಮ. ಮಾಜಿ ಅಧ್ಯಕ್ಷೆ ಚಂದ್ರಮ್ಮ, ಜಿಪಂ ಮಾಜಿ ಸದಸ್ಯರಾದ ಮಹದೇವ್, ರಮೇಶ್, ಮುದ್ದೇಗೌಡ, ಪ್ರಭಾಕರ್, ಡೊಳ್ಳೇಗೌಡ, ಚಿನ್ನಬುದ್ಧಿ, ಹುಣಸೂರು ಬಸವಣ್ಣ, ಸೋಮನಾಯ್ಕ್, ಮನ್ನೆಹುಂಡಿ ಮಹೇಶ್, ನಗರ ವಿಭಾಗದ ಸಂಚಾರ ನಿಯಂತ್ರಣಾಧಿಕಾರಿ ಜಿ.ಸಿ. ಶಿವಶಂಕರಪ್ಪ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ಮಹೇಶ್ ಹಾಜರಿದ್ದರು.
Key words: Officers, work , fast , MLC ,Dr. Yathindra Siddaramaiah