ಕಾಂಗ್ರೆಸ್ ಸದಸ್ಯರ ಅಮಾನತಿಗೆ MLC ಸಿ.ಟಿ ರವಿ ಆಗ್ರಹ

ಬೆಂಗಳೂರು,ಜನವರಿ,23,2026 (www.justkannada.in):  ನಿನ್ನೆ ವಿಧಾನಮಂಡಲ ಅಧಿವೇಶನ ಉದ್ದೇಶಿಸಿ ಒಂದೇ ಸಾಲಿನಲ್ಲಿ ಭಾಷಣ ಮುಗಿಸಿ ತೆರಳುತ್ತಿದ್ದ ರಾಜ್ಯಪಾಲರನ್ನ ಅಡ್ಡಗಟ್ಟಿದ ಆರೋಪ ಸಂಬಂಧ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡುವಂತೆ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ,  ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಅದು ಅಗೌರವ ಆಗಲಿದೆ. ಅಂತಹ ಸದಸ್ಯರನ್ನು ಅಮಾನತುಗೊಳಿಸಬೇಕು ಈಗಾಗಲೇ ನಾವು ವಿಧಾನ ಪರಿಷತ್ ಸಭಾಪತಿಗೆ ಮನವಿ ಮಾಡಿದ್ದೇವೆ ಎಂದರು.

ಸದನದಲ್ಲಿ  ಕಾಂಗ್ರೆಸ್ ಸದಸ್ಯರು ಅನುಚಿತ ವರ್ತನೆ ತೋರಿದ್ದಾರೆ.  ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ. ಈ ವಿಚಾರವಾಗಿ ಸಭಾಪತಿಗಳು ನಿರ್ಧಾರ ತೆಗೆದುಕೊಳ್ಳಬೇಕು.  ಸದನದ ರೂಲ್ಸ್ ಗೆ ಬೆಲೆ ಬರಬೇಕು ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಸಿಟಿ ರವಿ ಒತ್ತಾಯಿಸಿದರು.

Key words: MLC, CT Ravi, suspension, Congress members