ಸಚಿವರ ವಿರುದ್ದ ಶಾಸಕರು ಸಿಎಂಗೆ ಪತ್ರ  ಬರೆದಿಲ್ಲ: ಅದೆಲ್ಲಾ ಊಹಾಪೋಹ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಜುಲೈ,25,2023(www.justkannada.in): ಸಚಿವರ ವಿರುದ್ದ ಯಾವ ಶಾಸಕರೂ ಸಿಎಂಗೆ ಪತ್ರ  ಬರೆದಿಲ್ಲ. ಅದೆಲ್ಲಾ ಊಹಾಪೋಹ ಎಂದು  ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಈ ಕುರಿತು ಇಂದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರ ವಿರುದ್ದ  ಯಾರು ಸಹ ಪತ್ರ ಬರೆದಿಲ್ಲ. ಎಲ್ಲರೂ ಅವರವರ ಕ್ಷೇತ್ರದಲ್ಲಿ ಕೆಲಸ  ಮಾಡುತ್ತಿದ್ದಾರೆ. ಶಾಸಕರು ಗೆದ್ದಿರಲಿ, ಸೋಲು ಕಂಡಿರಲಿ, ಅವರನ್ನು ಗಮನದಲ್ಲಿ ಇಡಬೇಕು ಎಂದು ಹೇಳಿದ್ದೇವೆ. ನಮ್ಮದು ಕೆಲ ಕಾರ್ಯಕ್ರಮಗಳಿವೆ. ಅಸೆಂಬ್ಲಿ ಇದ್ದ ಕಾರಣ ಚರ್ಚೆ ಮಾಡಲು ಆಗಿಲ್ಲ.‌ ಅದರ ಬಗ್ಗೆ ಚರ್ಚೆ ಮಾಡಬೇಕು ಎಂದು ತಿಳಿಸಿದರು.

ಗ್ಯಾರಂಟಿಗಳ ಬಗ್ಗೆ ಜನರು ಬಹಳ ಆಸೆಯಲ್ಲಿ ಇದ್ದಾರೆ. ನಾವು ಗ್ಯಾರಂಟಿ ಕುರಿತಾಗಿ ಮಾತು ಕೊಟ್ಟಿದ್ದೇವೆ.‌ ಅದನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ವರ್ಗಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ವರ್ಗಾವಣೆ ವಿಚಾರವಾಗಿ ನನ್ನ ಇಲಾಖೆಯಲ್ಲಿ ಸದ್ಯ ಯಾವುದೇ ನಿರ್ಧಾರ ಕೈಗೊಳ್ಳದಂತೆ ತಿಳಿಸಿದ್ದೇನೆ. ವರ್ಗಾವಣೆಗೆ ಸಮಯದ ಮಿತಿ ಇದೆ.‌ ಸಮಯ ಮಿತಿಯಲ್ಲಿ ಮಾಡಲಾಗಿದೆ. ಉಳಿದಿದ್ದು ಸಿಎಂಗೆ ಬಿಡಲಾಗಿದೆ ಎಂದು ಹೇಳಿದರು.

Key words: MLAs – letter- CM –against- minister – DCM -DK Shivakumar.