ಮಳೆಯಿಂದ ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ಸೋರಿಕೆ: ಮುಖ್ಯ ಇಂಜಿನಿಯರ್ ಗೆ ಸಿಎಂ ಸಿದ್ಧರಾಮಯ್ಯ ತರಾಟೆ.

ಹಾವೇರಿ,ಜುಲೈ,25,2023(www.justkannada.in): ಮಳೆಯಿಂದ ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ ಸೋರುತ್ತಿರುವ ಹಿನ್ನೆಲೆ ಮುಖ್ಯ ಇಂಜಿನಿಯರ್ ಗೆ ಸಿಎಂ ಸಿದ್ಧರಾಮಯ್ಯ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.

ಹಾವೇರಿ ಜಿಲ್ಲಾ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆ ಮುಖ್ಯ ಇಂಜಿನಿಯರ್ ಮಂಜಪ್ಪಗೆ ತರಾಟೆ ತೆಗೆದುಕೊಂಡ ಸಿಎಂ ಸಿದ್ಧರಾಮಯ್ಯ,  ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ಏಕೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿಲ್ಲ. ಎಷ್ಟು ವರ್ಷದಿಂದ  ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಹಾವೇರಿ ಜಿಲ್ಲಾಸ್ಪತ್ರೆ ಕಟ್ಟಡ  ಸೋರುತ್ತಿದೆ ನೋಡಿದ್ದೀರಾ..? ನಿಮ್ಮ ಮನೆಯವರು ಏನಾದ್ರೂ ಇಲ್ಲಿ  ಚಿಕಿತ್ಸೆ ಪಡೆದಿದ್ರೆ ಹೀಗೆ ಮಾಡುತ್ತಿದ್ರಾ..?   ನಿಮ್ಮಇಲಾಖೆಯ ಮಂಜುನಾಥ್ ನನ್ನ ಸಸ್ಪೆಂಡ್ ಮಾಡಿದ್ದೀನಿ ಸಮಸ್ಯೆ ಬಗೆ ಹರಿಸದಿದ್ದರೇ ನಿನ್ನನ್ನೂ ಸಸ್ಪೆಂಡ್ ಮಾಡುತ್ತೇನೆ ಎಂದು ಮುಖ್ಯ ಇಂಜಿನಿಯರ್ ಮಂಜಪ್ಪಗೆ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದರು.

Key words: Leakage – Hospital -building -CM Siddaramaiah –class-Chief Engineer